ವಾರ್ಷಿಕ 155 ಕೋಟಿ ರೂಪಾಯಿ: ಆದಾಯದಲ್ಲಿ ಕುಕ್ಕೆ ದೇಗುಲ ಮತ್ತೆ ನಂಬರ್ ಒನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 155 ಕೋಟಿ 95 ಲಕ್ಷದ 19 ಸಾವಿರದ 567  ರೂ ರೂ ಆದಾಯ ಗಳಿಸಿದೆ. 2024 ಎಪ್ರೀಲ್ 1 ರಿಂದ 2025 ಮಾರ್ಚ್ 31 ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ.

ಇದರಲ್ಲಿ ಒಟ್ಟು 78,86,73,197.06 ರೂ ಖರ್ಚಾಗಿದ್ದು, ರೂ. 76,12,46,370.02  ಉಳಿತಾಯವಿದೆ. 2023-2024 ನೇ ಸಾಲಿನಲ್ಲಿ 146 ಕೋಟಿ ರೂ ಆದಾಯ ಗಳಿಸಿತ್ತು. ಈ ಬಾರಿ 155,65,19,567.08 ರೂ ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು ರೂ.9 ಕೋಟಿ ಅಧಿಕ ಆದಾಯ ಗಳಿಸಿದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಕಳೆದ 13 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು ಈ ಬಾರಿ ಪ್ರಪ್ರಥಮವಾಗಿ 155 ಕೋಟಿಗೂ ಮಿಕ್ಕಿ ಆದಾಯ ಗಳಿಸುವ ಮೂಲಕ ತನ್ನ ನಂಬರ್ ವನ್ ಸ್ಥಾನವನ್ನು ಮತ್ತೆ ಗಟ್ಟಿಗೊಳಿಸುವಲ್ಲಿ ಸಂಶಯವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!