ಅಫ್ಘಾನಿಸ್ತಾನದಲ್ಲಿ ಮತ್ತೆ 3.8 ತೀವ್ರತೆಯ ಭೂಕಂಪನ: ಪದೇ ಪದೇ ಈ ರೀತಿ ಆಗೋದಕ್ಕೆ ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚಿನ ದಿನಗಳಲ್ಲಿ ಅನೇಕ ರಾಷ್ಟ್ರಗಳಲ್ಲಿ ಭೂಕಂಪಗಳ ಸಂಭವ ಹೆಚ್ಚಾಗುತ್ತಿರುವ ನಡುವೆ, ಭಾನುವಾರ ಬೆಳಗಿನ ಜಾವ ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ. ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿದ ಮಾಹಿತಿ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8 ದಾಖಾಲಾಗಿತ್ತು.

ಭೂಕಂಪದ ಕೇಂದ್ರಬಿಂದುವು ನೆಲದೊಳಗೆ ಕೇವಲ 10 ಕಿಲೋಮೀಟರ್ ಆಳದಲ್ಲಿದ್ದು, ಇದು ಭೌಗೋಳಿಕ ದೃಷ್ಟಿಯಿಂದ ಅಪಾಯಕಾರಿ ಎನಿಸಿದೆ. ತೀವ್ರತೆ ಕಡಿಮೆಯಾದರೂ ಭೂಕಂಪದ ಕೆಂದ್ರ ಭೂಮಿ ಮೇಲ್ಮೈಯಲ್ಲಿ ನಿಕಟವಾಗಿರುವುದರಿಂದ ಕೆಲವೊಂದು ಕಟ್ಟಡಗಳಿಗೆ ಹಾನಿ ಸಂಭವಿಸಿರುವ ವರದಿಗಳು ಬಂದಿವೆ.

ಭೂಕಂಪದ ಹಿಂದಿರುವ ಕಾರಣ ಏನು?
ಅಫ್ಘಾನಿಸ್ತಾನದ ಈಶಾನ್ಯ ಭಾಗವಿರುವ ಹಿಂದೂ ಕುಶ್ ಪರ್ವತಶ್ರೇಣಿಯು ಟೆಕ್ಟೋನಿಕಲ್ ಆಗಿ ಸಕ್ರಿಯವಾಗಿರುವ ಪ್ರದೇಶ. ಭಾರತೀಯ ಮತ್ತು ಯುರೇಷಿಯನ್ ಫಲಕಗಳ ನಡುವೆ ನಿರಂತರವಾಗಿರುವ ಘರ್ಷಣೆ ಇಲ್ಲಿ ಭೌಗೋಳಿಕ ಒತ್ತಡವನ್ನು ಉಂಟುಮಾಡುತ್ತದೆ, ಇದು ಅಂತಿಮವಾಗಿ ಭೂಕಂಪಗಳಿಗೆ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!