ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಮತ್ತೊಂದು ಅದ್ಭುತ ಚಿತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಾಸಾದ ಶಕ್ತಿಶಾಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ನಕ್ಷತ್ರಗಳು ಹುಟ್ಟುವ ಕಂಬಗಳ ಚಿತ್ರವನ್ನು ಸೆರೆಹಿಡಿದಿದೆ. ಪ್ರಕೃತಿ ದೃಶ್ಯವನ್ನು ಹೋಲುವ ಈ ಚಿತ್ರವು ಅನಿಲ, ಧೂಳು ಮತ್ತು ದಟ್ಟವಾದ ಮೋಡಗಳೊಂದಿಗೆ ಹೊಸ ನಕ್ಷತ್ರಗಳನ್ನು ಪ್ರತಿನಿಧಿಸುತ್ತದೆ. ಮೂರು ಕಂಬಗಳು ಈ ಚಿತ್ರದಲ್ಲಿ ಭವ್ಯವಾದ ರಚನೆಗಳಾಗಿ ಕಂಡುಬರುತ್ತವೆ.

ಈ ಐಕಾನಿಕ್ ಸೃಷ್ಟಿಯು 6,500 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ವಿಶಾಲವಾದ ಈಗಲ್ ನೆಬ್ಯುಲಾದಲ್ಲಿ ಕಂಡುಬಂದಿದೆ. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು 1995 ರಲ್ಲಿ ಸೃಷ್ಟಿಯ ಕಂಬಗಳನ್ನು ಮೊದಲು ಗುರುತಿಸಿತು. 2014 ರಲ್ಲಿ ಅದನ್ನು ಮತ್ತೆ ಗುರುತಿಸಿದಾಗ ಅದು ಚೂಪಾದ ಕಂಬಗಳನ್ನು ಹೋಲುವಂತೆ ಕಂಡುಬಂದಿದ್ದಲ್ಲದೆ, ಅದರ ಬಣ್ಣ ಮತ್ತಷ್ಟು ತಿಳಿಯಾಗಿದೆ.

Nasa Old Pictures ಅನಿಲ ಮತ್ತು ಧೂಳಿನ ಪ್ರಮಾಣ ಹಾಗೂ ಹೊಸದಾಗಿ ರೂಪುಗೊಂಡ ನಕ್ಷತ್ರಗಳ ನಿಖರವಾದ ಎಣಿಕೆಗಳನ್ನು ನಿರ್ಧರಿಸಲು ಈ ಚಿತ್ರವು ಸಂಶೋಧಕರಿಗೆ ಸಹಾಯ ಮಾಡುತ್ತದೆ. ನಕ್ಷತ್ರ ರಚನೆಯ ಮಾದರಿಗಳನ್ನು ಪುನರ್ನಿರ್ಮಿಸಲು ಬಳಸಲಾಗುತ್ತದೆ. ಅಂತೆಯೇ, ಲಕ್ಷಾಂತರ ವರ್ಷಗಳಲ್ಲಿ ಈ ಧೂಳಿನ ಮೋಡಗಳಿಂದ ನಕ್ಷತ್ರಗಳು ಹೇಗೆ ರೂಪುಗೊಳ್ಳುತ್ತವೆ ಜೊತೆಗೆ ಕಣ್ಮರೆಯಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಈ ಚಿತ್ರವು ಉಪಯುಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!