ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮೃಣಾಲ್ ಠಾಕೂರ್ ತಮ್ಮ ಕರಿಯರ್‌ನ ಪೀಕ್‌ನಲ್ಲಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಸೂಪರ್ 30 ಮೂಲಕ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಮೃಣಾಲ್ ಸೀತಾರಾಮಂ ಮೂಲಕ ಮನೆಮಾತಾದರು.
ಇದೀಗ ಮೃಣಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಆಕ್ಟರ್ ಧನುಷ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಕೆಲವು ಕಡೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಮೃಣಾಲ್ ಜನ್ಮದಿನದ ಪಾರ್ಟಿಯಲ್ಲಿಯೂ ಕೂಡ ಧನುಷ್ ಭಾಗವಹಿಸಿದ್ದಾರೆ.
ಮೃಣಾಲ್ ಕೈ ಹಿಡಿದುಕೊಂಡು ಸಲುಗೆಯಿಂದ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ. ಇದರಿಂದಾಗಿಯೇ ಇಬ್ಬರು ಡೇಟಿಂಗ್‌ನಲ್ಲಿ ಇರಬಹುದು ಎನ್ನುವ ರೂಮರ್ಸ್ ಹರಡಿದೆ. ಆದರೆ ಕೆಲವರು ಇದೊಂದು ಫ್ರೆಂಡ್ಲಿ ಮಾತುಕತೆ, ಸಿನಿಮಾ ಫೀಲ್ಡ್‌ನಲ್ಲಿ ಕೈ ಹಿಡಿದುಕೊಂಡಿದ್ದಕ್ಕೆಲ್ಲಾ ಡೇಟಿಂಗ್ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
Dhanush and Mrunal Thakur are dating? pic.twitter.com/ItWYJdsm8a
— Aryan (@Pokeamole_) August 3, 2025