ರಾಜ್ಯದಲ್ಲಿ ಮತ್ತೊಂದು ಬಾಂಬ್ ಬೆದರಿಕೆ ಕರೆ, ಗೋಳಗುಮ್ಮಟ ಸ್ಫೋಟಿಸುವುದಾಗಿ ಸಂದೇಶ

ದಿಗಂತ ವರದಿ ವಿಜಯಪುರ:

ನಗರದ ಐತಿಹಾಸಿಕ ಗೋಳಗುಮ್ಮಟ ಸ್ಮಾರಕದ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಇಲ್ಲಿನ ಗೋಳಗುಮ್ಮಟ ಎದುರಿನ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಕಿಡಿಗೇಡಿಗಳು ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಮ್ಯೂಜಿಯಂನ ಹಲವು ಜಾಗೆಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದು, ಟೆರರೈಸರ್ಸ್ ಗ್ರುಪ್ ಹೆಸರಲ್ಲಿ ಇ-ಮೇಲ್ ಮಾಡಲಾಗಿದೆ. ಶುಕ್ರವಾರ ಸಂಜೆ ಇ-ಮೇಲ್ ಗೆ ಬಂದ ಸಂದೇಶ ಗೋಳಗುಮ್ಮಟ ಸಿಬ್ಬಂದಿಗಳು ವೀಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಲಾಗಿದೆ.

ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಪೊಲೀಸರು ಖಚಿತಪಡೆಸಿಕೊಂಡಿದ್ದಾರೆ. ಟೆರರೈಸರ್ಸ್ ಹೆಸರಲ್ಲಿ ಬಂದ ಇ- ಮೇಲ್ ಸಂದೇಶದ ಬಗ್ಗೆ ಗೋಳಗುಮ್ಮಟ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!