March 26, 2026
Thursday, March 26, 2026
spot_img

ಅಭಿಷೇಕ್ ಸಿಂಘ್ವಿ, ನೇತಂಗೆ ಮತ್ತೆ ಚಾನ್ಸ್: ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಇಬ್ಬರು ಹಾಲಿ ಸಂಸದರನ್ನು ಮರುನಾಮನಿರ್ದೇಶನ ಮಾಡಿದೆ. ಅಭಿಷೇಕ್ ಮನು ಸಿಂಘ್ವಿ ಅವರನ್ನು ತೆಲಂಗಾಣದಿಂದ ಮತ್ತು ಫುಲೊ ದೇವಿ ನೇತಂ ಅವರನ್ನು ಛತ್ತೀಸ್‌ಗಢದಿಂದ ಮತ್ತೆ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ಹರಿಯಾಣದಿಂದ ಕರಂವೀರ್ ಸಿಂಗ್ ಬೌಧ್ ಹಾಗೂ ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮ ಅವರನ್ನು ಪಕ್ಷ ನಾಮನಿರ್ದೇಶನ ಮಾಡಿದೆ.

ಅನುರಾಗ್ ಶರ್ಮಾ ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ ವೀಂದರ್ ಸಿಂಗ್ ಸುಖ್ ಅವರಿಗೆ ಸಮೀಪವರ್ತಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್ಸಿನ ಕಾಂಗ್ರಾ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಪಕ್ಷವು ಕಾಂಗ್ರೆಸ್‌ಗೆ ಒಂದು ರಾಜ್ಯಸಭೆ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಎಂ ಕ್ರಿಸ್ಟೋಫರ್ ಟಿಲಕ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ.

ತೆಲಂಗಾಣದ ಎರಡನೇ ಸ್ಥಾನಕ್ಕೆ ವೇಮ್ ನರೇಂದರ್ ರೆಡ್ಡಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.

ಇದೇ ವೇಳೆ ಭಾರತದ ಚುನಾವಣಾ ಆಯೋಗ ಮಾರ್ಚ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ.ಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !