ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಶುಕ್ರವಾರ ಸಾವನ್ನಪ್ಪಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ.
ನಮೀಬಿಯಾದಿಂದ ಸ್ಥಳಾಂತರಗೊಂಡಿದ್ದ ಮಧ್ಯ ವಯಸ್ಕ ಚೀತಾ ಸೂರಜ್ ಮೃತದೇಹವನ್ನು ಇಂದು ಬೆಳಗಿನ ಜಾವ ಗಸ್ತು ತಂಡ ಪತ್ತೆ ಮಾಡಿದೆ.
ಸೆಪ್ಟೆಂಬರ್ 17, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ ನಂತರ ಮೃತಪಟ್ಟ ಎಂಟನೇ ಚೀತಾ ಇದಾಗಿದೆ.