ಸ್ಯಾಂಡಲ್‌ವುಡ್‌ಗೆ ಮತ್ತೊಂದು ಕೀರ್ತಿ ಕಿರೀಟ: ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಹಾಗೂ ಕಲಾವಿದರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲ ವಸ್ತ್ರ ವಿನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಂ. ನವೀನ್ ಕುಮಾರ್ ಅವರಿಗೆ ಅಮೇರಿಕಾದ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.

ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವಾರು ಸ್ಟಾರ್ ನಟರ ಉಡುಪು ವಿನ್ಯಾಸದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಗಳಿಸಿಕೊಂಡಿರುವ ನವೀನ್ ಕುಮಾರ್, ಕಿರುತೆರೆಯಲ್ಲೂ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ತಮ್ಮ ನುಡಿಸ್ವರೂಪ ತೋರಿಸಿದ್ದನ್ನು ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಅವರ ವೃತ್ತಿಪರ ಸೇವೆ ಮತ್ತು ಸೃಜನಾತ್ಮಕತೆಯನ್ನು ಗುರುತಿಸಿ ಅಮೆರಿಕದ ವಿಶ್ವವಿದ್ಯಾಲಯ ಈ ಗೌರವ ನೀಡಿದೆ.

ಗೋವಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಬಾಲಿವುಡ್ ನಿರ್ಮಾಪಕ ಮೆಹುಲ್ ಕುಮಾರ್ ಹಾಗೂ ಗೋವಾದ ಸಮಾಜ ಕಲ್ಯಾಣ ಸಚಿವ ಸುಭಾಷ್ ದೇಸಾಯಿ ಅವರು ನವೀನ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದರು. ನವೀನ್ ಕುಮಾರ್ ತಂದೆ ಕೆ.ಎಸ್. ಮೋಹನ್ garments ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅವರಿಂದಲೇ ನವೀನಿಗೆ ಫ್ಯಾಷನ್ ಕ್ಷೇತ್ರದ ಮೇಲೆ ಪ್ರಭಾವ ಬಿದ್ದಿದ್ದು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಂತೆ ಮಾಡಿದೆ.

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ನೀಡಿದ ಸೇವೆಗಾಗಿ ನವೀನ್ ಅವರಿಗೆ ದೊರೆತ ಈ ಗೌರವ, ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯನ್ನೇ ತಂದಿದೆ. ಇದರಿಂದಾಗಿ ಕನ್ನಡ ಕಲಾವಿದರ ಪ್ರತಿಭೆ ವಿಶ್ವದ ಗಮನ ಸೆಳೆಯುತ್ತಿದ್ದು, ಸ್ಯಾಂಡಲ್‌ವುಡ್‌ನ ಕೀರ್ತಿ ಮತ್ತಷ್ಟು ಬೆಳಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!