ಮ್ಯಾನ್ಮಾರ್‌ನಲ್ಲಿ ಮತ್ತೊಮ್ಮೆ ನಡುಗಿದ ಭೂಮಿ: ಮೃತರ ಸಂಖ್ಯೆ 700ಕ್ಕೆ ಏರಿಕೆ, 1,670 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಾರ್ಚ್​​​ 28ರಂದು ಮ್ಯಾನ್ಮಾರ್‌ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂಥ ಕರಾಳ ದಿನವಾಗಿದೆ. ನಿನ್ನೆ ಮ್ಯಾನ್ಮಾರ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿದವು.

Myanmar earthquake: USGS analysis projects thousands of deaths, economic loss ಈ ಪ್ರಬಲ ಭೂಕಂಪದಲ್ಲಿ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 730 ಜನರು ಗಾಯಗೊಂಡಿದರು. ಇದೀಗ ಮತ್ತೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ಮಧ್ಯ ರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಇದೀಗ ಒಟ್ಟು ಸಾವಿನ ಸಂಖ್ಯೆ 700ಕ್ಕೆ ದಾಟಿದೆ. 1,670 ಜನರು ಗಾಯಗೊಂಡಿದ್ದಾರೆ.

Myanmar-Thailand earthquake death toll passes 700 | Earthquakes News | Al Jazeeraರಾಜಧಾನಿ ನೇಪಿಡಾವ್‌ನಲ್ಲಿರುವ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜನರ ಮೃತಪಡುತ್ತಿದ್ದಾರೆ. ಇನ್ನು ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Myanmar Thailand Earthquake Live News: Over 140 dead in Myanmar, death toll likely to rise - The Economic Timesಸತ್ತವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್, ‘ತುರ್ತು ಪರಿಸ್ಥಿತಿ’ ಘೋಷಿಸಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಇನ್ನು ನಮ್ಮ ಸಹಾಯಕ್ಕೆ ಬರುವಂತೆ ಬೇರೆ ಬೇರೆ ದೇಶಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Myanmar Earthquake Highlights: Myanmar quake toll 144 dead, 732 injured, expected to rise - The Economic Times ಇನ್ನು ಉತ್ತರ ಥೈಲ್ಯಾಂಡ್‌ನಲ್ಲೂ ಕಂಪನದ ಅನುಭವವಾಯಿತು, ಅಲ್ಲಿ ಕೆಲವು ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು ತುರ್ತು ಪರಿಶೀಲನಾ ಸಭೆ ನಡೆಸಲು ಫುಕೆಟ್‌ಗೆ ಅಧಿಕೃತ ಭೇಟಿ ನೀಡಬೇಕಿತ್ತು ಅದನ್ನು ಕೂಡ ರದ್ದು ಮಾಡಿದ್ದಾರೆ. ಇದೀಗ ಥೈಲ್ಯಾಂಡ್‌ ನಗರದಲ್ಲಿ ‘ತುರ್ತು ಪರಿಸ್ಥಿತಿ’ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!