ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 1, 2020 ರಂದು ಎರಡು ಗಂಟೆ ನಲವತ್ತು ನಿಮಿಷಗಳ ಭಾಷಣದ ಮೂಲಕ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಬಜೆಟ್ ಭಾಷಣದ ದಾಖಲೆಯನ್ನು ಹೊಂದಿದ್ದಾರೆ.
ಲಂಡನ್ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಘೋಷಣೆಗಳನ್ನು ಮಾಡಲು ಅನುಮತಿಸುವ ವಸಾಹತುಶಾಹಿ ಸಂಪ್ರದಾಯಕ್ಕೆ ಅನುಗುಣವಾಗಿ ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತಿತ್ತು. ಮೊದಲ ಬಾರಿಗೆ 1999 ರಲ್ಲಿ ಬೆಳಿಗ್ಗೆ 11 ಗಂಟೆಗೆ ಯಶವಂತ್ ಸಿಂಗ್ ಬಜೆಟ್ ಅನ್ನು ಅನಾವರಣಗೊಳಿಸಿದರು.