April 13, 2026
Monday, April 13, 2026
spot_img

ದುಬೈನಲ್ಲಿ ಮತ್ತೆ ಸ್ಫೋಟ: ಬುರ್ಜ್ ಖಲೀಫಾ ಬಳಿ ಆವರಿಸಿದ ದಟ್ಟ ಹೊಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ದುಬೈನಲ್ಲಿ ಮತ್ತೆ ದೊಡ್ಡ ಸ್ಫೋಟಗಳ ಶಬ್ದ ಕೇಳಿ ಬಂದಿದ್ದು, ಜನರಲ್ಲಿ ಆತಂಕ ಮೂಡಿದೆ.

ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಿರುವ ದುಬೈನ ಬುರ್ಜ್ ಖಲೀಜಾ ಬಳಿ ಶುಕ್ರವಾರವೂ ಸ್ಫೋಟದ ಸದ್ದು ಕೇಳಿಬಂದಿದೆ. ಬಳಿಕ ನಗರದ ಕೇಂದ್ರ ಭಾಗದಲ್ಲಿ ದಟ್ಟವಾದ ಹೊಗೆ ಕಂಡುಬಂದಿದೆ.

ಮಧ್ಯ ದುಬೈನ ಕಟ್ಟಡದ ಹೊರಭಾಗದಲ್ಲಿ ಸಣ್ಣ ಪ್ರಮಾಣದ ದಾಳಿಯಾಗಿದೆ ಆದರೆ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಹೇಳಿದೆ. ಇಲ್ಲಿಯವರೆಗೂ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ.

ಘಟನೆಯ ನಂತರ ದುಬೈ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸಿದ್ದಾರೆ. ಕಟ್ಟಡಕ್ಕೆ ಗಮನಾರ್ಹ ಹಾನಿಯಾಗಿದೆ.

ದುಬೈ ಇಂಟರ್‌ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್‌ಸಿ) ನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಗುರುವಾರವೂ ದುಬೈನ ಡೌನ್ ಟೌನ್ ನಲ್ಲಿ ಸಣ್ಣ ಡ್ರೋನ್ ದಾಳಿ ನಡೆದಿತ್ತು ಎಂದು ದುಬೈ ಸರ್ಕಾರದ ಮಾಧ್ಯಮ ಕಚೇರಿಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !