September 15, 2026
Tuesday, September 15, 2026
spot_img

ಪಾಕ್ ಸಂಧಾನ ಫೇಲ್: ಅಮೆರಿಕ -ಇರಾನ್ ನಡುವೆ ಮಧ್ಯಸ್ಥಿಕೆಗೆ ರಷ್ಯಾ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ಮಧ್ಯಸ್ಥಿಕೆಯ ಅಮೆರಿಕ -ಇರಾನ್ ಮಾತುಕತೆ ವಿಫಲವಾಗಿದ್ದು, ಇದರ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾನು ಸಂಧಾನ ಮಾಡುವೆ ಎಂದು ಮುಂದೆ ಬಂದಿದ್ದಾರೆ.

ಈ ಕುರಿತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತುಕತೆ ನಡೆಸಿದ ಪುಟಿನ್ , ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ವಿರಾಮ ಹಾಡಲು ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ರಷ್ಯಾ ರಾಜತಾಂತ್ರಿಕ ಬೆಂಬಲ ನೀಡಲು ತಯಾರಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ.

1979ರ ನಂತರ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನೇರ ಮಾತುಕತೆ ನಡೆದಿದ್ದರೂ, ಅದು ಯಶಸ್ಸು ಕಾಣಲಿಲ್ಲ. ಇದರ ನಡುವೆ ಹಾರ್ಮುಜ್ ಜಲಸಂಧಿ ಮೇಲಿನ ಹಿಡಿತಕ್ಕೂ ಸಂಬಂಧಿಸಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಇನ್ನೂ ಮುಂದುವರಿದಿದೆ.

ಹೀಗಾಗಿ ರಷ್ಯಾ ಇರಾನ್ ಹಾಗೂ ಅಮೆರಿಕ ಜೊತೆ ಸಂಧಾನ ನಡೆಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಸಾಗಲಿದೆ ಎಂದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !