Wednesday, December 10, 2025

ಬೆಂಗಳೂರಿಗೆ ಮತ್ತೊಂದು ಗರಿ: ಬೊಟಾನಿಕಲ್ ಗಾರ್ಡನ್‌ಗಳ ಪಟ್ಟಿಯಲ್ಲಿ ಲಾಲ್‌ಬಾಗ್‌ಗೆ ಜಾಗತಿಕ ನಂ.1 ಪಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೂಗಲ್‌ನ ವಾರ್ಷಿಕ ‘ಇಯರ್ ಇನ್ ಸರ್ಚ್’ ವರದಿಯ ಪ್ರಕಾರ, 2025ರಲ್ಲಿ ಜನವರಿ 01ರಿಂದ ನವೆಂಬರ್ 25ರ ವರೆಗಿನ ಅವಧಿಯಲ್ಲಿ ಗೂಗಲ್ ಮ್ಯಾಪ್ಸ್‌ನಲ್ಲಿ ಹುಡುಕಾಟಗಳ ಆಧಾರದ ಮೇಲೆ ಲಾಲ್‌ಬಾಗ್ ಸಸ್ಯೋದ್ಯಾನವು ವಿಶ್ವದ ಅತ್ಯಂತ ಹೆಚ್ಚು ಹುಡುಕಾಟಗೊಂಡ ಸಸ್ಯತೋಟವಾಗಿ ಅಗ್ರಸ್ಥಾನ ಗಳಿಸಿದೆ.

ವಿಶ್ವದ ಅತ್ಯಂತ ಹೆಚ್ಚು ಹುಡುಕಾಟಗೊಂಡ ಸಸ್ಯತೋಟ ಸಾಧನೆಯನ್ನು ಗೂಗಲ್ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. ಈ ವರದಿಯಲ್ಲಿ ಜಾಗತಿಕವಾಗಿ ಅತ್ಯಂತ ಹೆಚ್ಚು ಹುಡುಕಾಟಗೊಂಡ ಐದು ಸಸ್ಯತೋಟಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಮೊದಲ ಸ್ಥಾನ ಸಿಕ್ಕಿದೆ.

ಉಳಿದಂತೆ ನಂತರ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ನ ರಾಯಲ್ ಬೊಟಾನಿಕ್ ಗಾರ್ಡನ್ಸ್, ಕ್ಯೂ.. ಇಂಡೋನೇಷ್ಯಾದ ಬೊಗೋರ್ ಬೊಟಾನಿಕಲ್ ಗಾರ್ಡನ್ಸ್, ಸಿಂಗಾಪುರದ ಸಿಂಗಾಪುರ್ ಬೊಟಾನಿಕ್ ಗಾರ್ಡನ್ಸ್, ಯುನೈಟೆಡ್ ಕಿಂಗ್‌ಡಮ್ ನ ಈಡನ್ ಪ್ರಾಜೆಕ್ಟ್ ಕ್ರಮವಾಗಿ ಸ್ಥಾನಪಡೆದುಕೊಂಡಿದೆ.

ಟಾಪ್‌ ಐದು ಗಾರ್ಡನ್‌ಗಳಿವು
ಲಾಲ್‌ಬಾಗ್‌ ಬೆಂಗಳೂರು ಕರ್ನಾಟಕ
ರಾಯಲ್‌ ಬೊಟಾನಿಕಲ್‌ ಗಾರ್ಡನ್‌ ಯುಕೆ
ಬೋಗೋರ್‌ ಬೊಟಾನಿಕಲ್‌ ಗಾರ್ಡನ್‌ ಇಂಡೋನೇಶಿಯಾ
ಸಿಂಗಾಪೂರ್‌ ಬೊಟಾನಿಕಲ್‌ ಗಾರ್ಡನ್‌ ಸಿಂಗಾಪುರ್
ಈಡೆನ್‌ ಪ್ರಾಜೆಕ್ಟ್‌ ಯುಕೆ

error: Content is protected !!