SHOCKING | ತಾಯಿ ಗರ್ಭದಲ್ಲಿರುವ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಾಯಿಯ ಗರ್ಭದೊಳಗಿರುವ ಪುಟ್ಟ ಮಗುವಿನೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇದು ಅತಿ ಅಪರೂಪದ ಘಟನೆಯಾಗಿದ್ದು, ಪ್ರತಿ 200ರಲ್ಲಿ ಒಂದು ಈ ರೀತಿಯ ಪ್ರಕರಣಗಳಿರುತ್ತವೆ. ಎರಡು ದಿನಗಳ ಹಿಂದೆ 32 ವರ್ಷದ ಮಹಿಳೆಯೊಬ್ಬರಿಗೆ ಸೋನೋಗ್ರಫಿ ನಡೆಸಿದಾಗ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣದಲ್ಲಿ ಭ್ರೂಣದ ಪ್ರಕರಣ ಪತ್ತೆಯಾಗಿದೆ. ಭಾರತದಲ್ಲಿ ಕೇವಲ 15-20 ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿವೆ.

ನಾನು ಆರಂಭದಲ್ಲಿ ಆಶ್ಚರ್ಯಚಕಿತನಾದೆ, ಎಚ್ಚರಿಕೆಯಿಂದ ಸ್ಕ್ಯಾನಿಂಗ್ ರಿಪೋರ್ಟ್​ ಪರಿಶೀಲಿಸಿದೆ. ಆಗ ಮಗುವಿನೊಳಗೆ ಭ್ರೂಣ ಇರುವುದು ದೃಢಪಟ್ಟಿದೆ. ಮಹಿಳೆಗೆ 9 ತಿಂಗಳಾಗಿವೆ, ಇನ್ನು ಕೆಲವೇ ದಿನಗಳಲ್ಲಿ ಆಕೆ ಮಗುವಿಗೆ ಜನ್ಮ ಕೊಡುವವಳಿದ್ದಳು, ಆದರೆ ಹಿಂದೆ ಮಾಡಿರುವ ಯಾವ ಸ್ಕ್ಯಾನಿಂಗ್​ಗಳಲ್ಲೂ ಇದು ಪತ್ತೆಯಾಗಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದು ಅಪರೂಪದ ಸ್ಥಿತಿಯಾಗಿದ್ದು, ಹಿಂದಿನ ಸೋನೋಗ್ರಫಿಯಲ್ಲೂ ಕೂಡ ಪತ್ತೆಯಾಗಿರಲಿಲ್ಲ. ಒಂದೆರಡು ದಿನ ನಾನು ವಿವರವಾದ ಅಧ್ಯಯನ ಮಾಡಿದ್ದೇವೆ. ಅವಳಿ ಮಕ್ಕಳಿರುವ ಕೆಲ ಕೇಸ್‌ನಲ್ಲಿ ಈ ರೀತಿ ಆಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!