ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ರಂಗಮನೆಯ ಸುಜನಾ ಸುಳ್ಯ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಜನಾ ಸುಳ್ಯ ಎಂದೇ ಪ್ರಸಿದ್ಧರಾಗಿದ್ದ ಸುಳ್ಯ ಜಯರಾಮ ನಾವೂರು ಅವರು ಯಕ್ಷರಂಗದ ಬಹುಮುಖ ಪ್ರತಿಭೆಯ ಕಲಾವಿದರಾಗಿದ್ದರು.
ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ ’ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ ಅವರ ತಂದೆ. ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕ ತಿಕ ಚಟುವಟಿಕೆಗಳಲ್ಲಿಯೂ ಸುಜನಾ ತೊಡಗಿಸಿಕೊಂಡಿದ್ದರು. ಮೃತರ ನಿಧನಕ್ಕೆ ನಾಡಿನ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

