August 31, 2026
Monday, August 31, 2026
spot_img

ನಾಳೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಭೇಟಿ

ಹೊಸದಿಗಂತ ವರದಿ, ಸುಬ್ರಹ್ಮಣ್ಯ:

ಮಾಜಿ ಪ್ರಧಾನಿ,ರಾಜ್ಯ ಸಭಾ ಸಂಸತ್‌ ಸದಸ್ಯ ಹೆಚ್‌.ಡಿ.ದೇವೇಗೌಡ ಅವರು ಮಾ.1ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಹೆಚ್‌.ಡಿ.ದೇವೇಗೌಡ ಅವರು ಮಾ.1ರಂದು ಸಂಜೆ 5.20ಕ್ಕೆ ಹೆಲಿಕಾಫ್ಟರ್‌ ಮೂಲಕ ಬೆಂಗಳೂರಿನಿಂದ ಬಿಳಿನೆಲೆ ಹೆಲಿಪ್ಯಾಡ್‌ನಲ್ಲಿ ಬರಲಿದ್ದಾರೆ. ಬಿಳಿನೆಲೆಯಿಂದ ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವರು. 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು.

ಅಂದು ರಾತ್ರಿ ಸುಬ್ರಹ್ಮಣ್ಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ಮಾ.2ರಂದು ಬೆಳಗ್ಗೆ 6 ಗಂಟೆಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಸುಬ್ರಹ್ಮಣ್ಯದಿಂದ ರಸ್ತೆ ಮಾರ್ಗದ ಮೂಲಕ ಬಿಳಿನೆಲೆ ಹೆಲಿಪ್ಯಾಡ್‌ಗೆ ತೆರಳಿ 3 ಗಂಟೆಗೆ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿನತ್ತ ನಿರ್ಗಮಿಸುವರು. ಪ್ರವಾಸ ವೇಳೆ ಮಾಜಿ ಪ್ರಧಾನಿ ಅವರಿಗೆ ಝಡ್‌ ಪ್ಲಸ್‌ ಕೆಟಗರಿ ಭದ್ರತೆ ಇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !