ಈಶಾ ಫೌಂಡೇಶನ್‌ನಿಂದ ಮತ್ತೊಂದು ಒಳ್ಳೆ ಕೆಲಸ : ರೈತ ಉತ್ಪಾದಕ ಕಂಪನಿಗಳ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈಶಾ ಫೌಂಡೇಶನ್​ನಿಂದಲೇ ರೈತ ಉತ್ಪಾದಕ ಕಂಪನಿಗಳ ಆರಂಭ ಮಾಡಲಾಗಿದೆ. ಆ ಮೂಲಕ ರೈತರಿಗೆ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡುತ್ತೇವೆ. ಸದ್ಯಕ್ಕೆ ಹತ್ತು ಸಾವಿರ ರೈತರಿಗೆ ಮಾರ್ಗದರ್ಶನ ಮಾಡಲು ಸನ್ನದ್ದವೆಂದು ಸದ್ಗುರು ಜಗ್ಗಿ ವಾಸುದೇವ್ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ‌ ಬಳಿಯ ಆದಿಯೋಗಿ ಈಶಾ ಕೇಂದ್ರಕ್ಕೆ ಇಂದು ಸದ್ಗುರು ಜಗ್ಗಿ ವಾಸುದೇವ್ ಅವರು ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಈಶಾ ಸಂಸ್ಥೆ ವತಿಯಿಂದ ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದ ಜನ ಮದ್ಯವ್ಯಸನಿಗಳಾಗುತ್ತಿದ್ದಾರೆ. ಕೃಷಿ ಕಾಯಕ ಮಾಡಿ ಮದ್ಯ ಸೇವನೆ ಮಾಡಿ ಮಲಗಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಉತ್ಸಾಹ ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದವರಿಗೆ ಗ್ರಾಮೋತ್ಸವ ಕ್ರೀಡೆಗಳನ್ನ ಆಯೋಜನೆ ಮಾಡುವ ಮೂಲಕ ಮದ್ಯ ವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ. ಇನ್ನೂ ದೇಶದಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಬೇಕಿದೆ. ಲಾಭವಿಲ್ಲದ ವಿಚಾರಗಳ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ. ಎಲೆಕ್ಟ್ರಿಕಲ್​ ವಾಹನಗಳಿಂದ ಪರಿಸರಕ್ಕೆ ಅನುಕೂಲವಿಲ್ಲ. ನನ್ನ ಹೇಳಿಕೆ ವಿವಾದ ಆದರೂ ಪರವಾಗಿಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲೆಕ್ಟ್ರಿಕಲ್​ ವಾಹನಗಳು ಸೂಕ್ತ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!