ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್‌ನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ 19.15 ಕಿ.ಮೀ ಉದ್ದದ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮೆಟ್ರೋ ಸಂಚಾರ ಆರಂಭದೊಂದಿಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇದೇ ಆಗಸ್ಟ್ 11,ರಿಂದ ಫೀಡರ್ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಸೇವೆ ಮೆಟ್ರೋ ನಿಲ್ದಾಣಗಳಿಂದ ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಬೊಮ್ಮಸಂದ್ರ ಮತ್ತು ಇತರ ಪ್ರಮುಖ ಮಾರ್ಗಗಳಿಗೆ ‘ಫಸ್ಟ್ ಮೈಲ್’ ಮತ್ತು ‘ಲಾಸ್ಟ್ ಮೈಲ್’ ಸಂಪರ್ಕ ಒದಗಿಸುತ್ತದೆ.
ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಮಾತನಾಡಿ ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ಭವಿಷ್ಯದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಲ್ದಾಣಗಳ ಸುತ್ತಮುತ್ತ ಇವಿ ಚಾರ್ಜಿಂಗ್ ಸ್ಟೇಷನ್‌ಗಳು, ಆಟೋ ಸ್ಟ್ಯಾಂಡ್‌ಗಳು ಮತ್ತು ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲತೆ ದೊರೆಯಲಿದೆ.
ಲಕ್ಷಾಂತರ ಪ್ರಯಾಣಿಕರಿಗೆ ಲಾಭ:
ಯೆಲ್ಲೋ ಲೈನ್‌ನ 16 ಎಲಿವೇಟೆಡ್ ನಿಲ್ದಾಣಗಳು ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ಫೀಡರ್ ಬಸ್ ಸೇವೆಯಿಂದ ಸಿಲ್ಕ್ ಬೋರ್ಡ್ ಸೇರಿದಂತೆ ಹಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ.
ಈ ಹೊಸ ಸಂಚಾರ ವ್ಯವಸ್ಥೆಯು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಜಾಲಕ್ಕೆ ಹೊಸ ಶಕ್ತಿ ತುಂಬಿ, ಪ್ರಯಾಣಿಕರಿಗೆ ವೇಗದ, ಸುಗಮ ಹಾಗೂ ಪರಿಸರ ಸ್ನೇಹಿ ಸಂಚಾರದ ಅನುಭವ ನೀಡಲಿದೆ.