Tuesday, November 18, 2025

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ: ಸೋದರ ಮಾವನ ಜೊತೆ ಸೇರಿ ಗಂಡನನ್ನೇ ಹತ್ಯೆಗೈದ ಪತ್ನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು, ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ಸೋದರ ಮಾವನ ಜೊತೆ ಸೇರಿ ಗಂಡನನ್ನೇ ಪತ್ನಿ ಕೊಲೆ ಮಾಡಿದ್ದಾಳೆ.

ವೆಂಕಟೇಶ್ (65) ಕೊಲೆಯಾದ ಪತಿ ಎಂದು ತಿಳಿದು ಬಂದಿದೆ.ಸೋದರಮಾವ ರಂಗಸ್ವಾಮಿ ಹಾಗೂ ಪತ್ನಿ ಪಾರ್ವತಿ ಕೊಲೆ ಮಾಡಿದ್ದಾರೆ.

10 ವರ್ಷಗಳ ಹಿಂದೆ ವೆಂಕಟೇಶ್ ಮೊದಲ ಹೆಂಡತಿಯನ್ನು ಬಿಟ್ಟಿದ್ದ 6 ವರ್ಷಗಳ ಹಿಂದೆ ಪಾರ್ವತಿಯನ್ನು ಮದುವೆಯಾಗಿದ್ದ. ಮನೆಯನ್ನ ತನ್ನ ಹೆಸರಿಗೆ ಬರೆಯುವಂತೆ ಪಾರ್ವತಿ ಗಲಾಟೆ ಮಾಡಿದ್ದಾಳೆ. ಮನೆ ಇಲ್ಲ ಅಂದರೆ ಆರು ಲಕ್ಷ ಹಣ ಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಆಗ ವೆಂಕಟೇಶ್ 2:30 ಲಕ್ಷ ಕೊಡುತ್ತೇನೆ ಅಂತ ಹೇಳಿದ್ದಾನೆ. ಇದೇ ವಿಚಾರವಾಗಿ ಗಲಾಟೆ ಆಗಿ ಪತಿಯನ್ನು ಕೊಲೆ ಮಾಡಿದ್ದಾಳೆ.

error: Content is protected !!