ಅರಣ್ಯ ಅಧಿಕಾರಿಗಳಿಗೆ ಮತ್ತೊಂದು ತಲೆನೋವು! ಸಫಾರಿ ಬುಕಿಂಗ್ ನಕಲಿ ವೆಬ್‌ಸೈಟ್‌ಗಳ ಹಾವಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹೆಚ್ಚುತ್ತಿರುವ ಕಾಡು ಪ್ರಾಣಿಗಳ ಭೇಟೆ ಹಾಗೂ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತೊಂದು ಹೊಸ ತಲೆ ನೋವು ಆರಂಭವಾಗಿದೆ.

ಕರ್ನಾಟಕದ ಹುಲಿ ಮೀಸಲು ಪ್ರದೇಶ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ನಲ್ಲಿ ಸಫಾರಿ ಬುಕಿಂಗ್‌ ಮಾಡಲಾಗುತ್ತಿದೆ. ಬಿಬಿಪಿ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ, ನಕಲಿ ವೆಬ್‌ಸೈಟ್ ಗುರುತಿಸಲಾಗಿದ್ದು ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರವಾಸಿಗರು ಮತ್ತು ನಾಗರಿಕರು ಇದಕ್ಕೆ ಬಲಿಯಾಗದಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನೋಂದಾಯಿತ ಮತ್ತು ಪ್ರಚಾರ ಮಾಡಲಾದ ಸರ್ಕಾರಿ ಇಲಾಖೆಯ ಪೋರ್ಟಲ್‌ಗಳ ಮೂಲಕ ಬುಕಿಂಗ್‌ ಮಾಡುವಂತೆ ಇಲ್ಲವೇ ಬುಕಿಂಗ್‌ ಮಾಡಲು ಅರಣ್ಯ ಪ್ರದೇಶಗಳು ಮತ್ತು ಬಿಬಿಪಿಗೆ ಭೇಟಿ ನೀಡಬೇಕೆಂದು ಸೂಚಿಸಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿ ಬುಕಿಂಗ್ ಮಾಡುವ ಯಾವುದೇ ವೆಬ್‌ಸೈಟ್ ಇಲ್ಲ ಏಕೆಂದರೆ ಇದು ಮೀಸಲು ಅರಣ್ಯ ಪ್ರದೇಶವಾಗಿದೆ. ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಇದು ನಕಲಿ ವೆಬ್‌ಸೈಟ್ ಎಂಬುದಾಗಿ ಕಂಡುಬಂದಿದೆ. ಇದು ವಯಸ್ಕರಿಗೆ ರೂ. 2,000 ಮತ್ತು ಮಕ್ಕಳಿಗೆ 1,000 ರೂ ಗೆ ಸಫಾರಿ ಟಿಕೆಟ್‌ಗಳನ್ನು ನೀಡುತ್ತಿದೆ. ಪಾವತಿ ಮಾಡಿದ ನಂತರ, ವಹಿವಾಟು ಉಲ್ಲೇಖದ ರಶೀದಿಯನ್ನು ರಚಿಸಲಾಗುತ್ತದೆ, ಆದರೆ ಬೇರೆ ಯಾವುದೇ ಸಫಾರಿ ವಿವರಗಳಿರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!