ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ವೈಮಾನಿಕ ನೋಟವನ್ನು (Aerial View) ನೀಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಆರು ಜನರು ಸಾವನ್ನಪ್ಪಿದ ಘಟನೆ ನ್ಯೂಯಾರ್ಕ್‌ನ ಹಡ್ಸನ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಮೂವರು ಮಕ್ಕಳು, ಒಬ್ಬ ಪೈಲಟ್ ಮತ್ತು ಸ್ಪೇನ್‌ನ ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.
ಈ ಹೆಲಿಕಾಪ್ಟರ್ ಜನರನ್ನು ಹೊತ್ತೊಯ್ಯುತ್ತಾ ಮೊದಲಿಗೆ ಲೋವರ್ ಮ್ಯಾನ್‌ಹ್ಯಾಟನ್‌ನಿಂದ ಹಾರಿದೆ. ಅದು ಸ್ವಾತಂತ್ರ್ಯ ಪ್ರತಿಮೆಯ ಸುತ್ತ ಸುತ್ತುತ್ತಾ ನಂತರ ಹಡ್ಸನ್ ನದಿಯ ಉದ್ದಕ್ಕೂ ಉತ್ತರಕ್ಕೆ ಜಾರ್ಜ್ ವಾಷಿಂಗ್ಟನ್ ಸೇತುವೆಯ ಕಡೆಗೆ ಸಾಗಿದೆ. ಇದಾದ ನಂತರ ಅದು ದಕ್ಷಿಣಕ್ಕೆ ತಿರುಗಿ ನ್ಯೂಜೆರ್ಸಿ ಬಳಿ ನದಿಗೆ ಬಿದ್ದಿದೆ.
ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ, ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ,ಕೋಸ್ಟ್ ಗಾರ್ಡ್ ಮತ್ತು ತುರ್ತು ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.