ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಡಿದೆ. ಇದು ರಾಜ್ಯದಲ್ಲಿ ನೀಟ್ ಕಾರಣಕ್ಕಾಗಿ ಆದ 19 ನೇ ಸಾವಾಗಿದೆ.
ಚೆನ್ನೈನ ದೇವದರ್ಶಿನಿ ವೈದ್ಯೆಯಾಗುವ ಕನಸು ಕಂಡಿದ್ದಳು. ಇದಕ್ಕಾಗಿ NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಈಗಾಗಲೇ ಮೂರು ಬಾರಿ ನೀಟ್ನಲ್ಲಿ ಪಾಸಾಗಿದ್ದಾರೆ. ಇದೀಗ ನಾಲ್ಕನೇ ಬಾರಿ ಪರೀಕ್ಷಾ ಸಿದ್ಧತೆ ನಡೆಸುತ್ತಿರುವಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.
ಚೆನ್ನೈನ ಅಯ್ಯನ್ಶೇರಿ ಪ್ರದೇಶದ ನಿವಾಸಿಯಾದ ದೇವದರ್ಶಿನಿ (21) 2023 ರಿಂದ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಮೂರು ಬಾರಿ ನೀಟ್ ಪರೀಕ್ಷೆ ಬರೆದಿದ್ದರೂ, ಅರ್ಹತೆಗೆ ಬೇಕಾದಷ್ಟು ಅಂಕ ಗಳಿಸಿರಲಿಲ್ಲ. ಇದರಿಂದ ಆಕೆ ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.
ಆದ್ರೆ ಮಾರ್ಚ್ 28 ರಂದು ಆಕೆ ತಂದೆ ನಡೆಸುತ್ತಿದ್ ಬೇಕರಿಯಲ್ಲಿ ಕೆಲಸ ಮಾಡಿ ಬಳಿಕ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಪಕ್ಷಗಳಿಂದ ಆಕ್ರೋಶ
ನೀಟ್ಗೆ ಮತ್ತೊಂದು ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದರ ವಿರುದ್ಧ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ನೀಟ್ ಪರೀಕ್ಷೆಯ ಭಯದಿಂದ ಚೆನ್ನೈನಲ್ಲಿ ದೇವದರ್ಶಿನಿ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಆಘಾತಕಾರಿ. ಆಡಳಿತರೂಢ ಡಿಎಂಕೆ ಇದರ ವಿರುದ್ಧ ಏನೂ ಮಾಡುತ್ತಿಲ್ಲ. ಈ ಮೂಲಕ ತಮಿಳುನಾಡು ವಿದ್ಯಾರ್ಥಿಗಳ ವೈದ್ಯಕೀಯ ಕನಸುಗಳನ್ನು ನಾಶಮಾಡುತ್ತಿದೆ ಎಂದು ಆಕ್ರೋಶ ಟೀಕಿಸಿದ್ದಾರೆ.