April 5, 2026
Sunday, April 5, 2026
spot_img

ಲವ್ ಜೆಹಾದ್ ಯತ್ನ ಪ್ರಕರಣ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ: ಪರಿಚಯದ ಲಾಭ ಪಡೆದು ಲೈಂಗಿಕ ದೌರ್ಜನ್ಯ?

ಹೊಸದಿಗಂತ ಹುಬ್ಬಳ್ಳಿ:

ಜಿಮ್ ನಲ್ಲಿ ‘ಲವ್ ಜಿಹಾದ್’ ಯತ್ನ‌ ಆರೋಪದ ಪ್ರಕರಣ ಇನ್ನೂ ಹಸಿಯಾಗಿರುವ ನಡುವೆಯೇ, ಭಿನ್ನ ಮತೀಯ ಯುವಕ, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಮರಿಪೇಟೆ ನಿವಾಸಿ ಮುಫೀಜ್ ಮಿಯಾನವರ (23) ಎಂಬಾತನ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆ ಯುವತಿ ಮತ್ತು ಆರೋಪಿ ಮುಫೀಜ್ ಕಳೆದ‌ ಐದು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಪರಿಚಯವಾಗಿದ್ದರು. ಈ ಪರಿಚಯವನ್ನು ಬಳಸಿಕೊಂಡ ಆರೋಪಿ, ಯುವತಿಯೊಂದಿಗೆ ಸ್ನೇಹ ಬೆಳೆಸಿ ನಂಬಿಕೆ ದ್ರೋಹ ಮಾಡಿದ್ದಾನೆ. ಗದಗ ರಸ್ತೆಯ ಮೇಲ್ಸೇತುವೆ ಬಳಿ ಯುವತಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ‌ ಉಲ್ಲೇಖಿಸಲಾಗಿದೆ.

ಕಳೆದ ನವೆಂಬರ್ 2025ರಲ್ಲಿ, ತನ್ನ ಬಳಿಯಿದ್ದ ವಿಡಿಯೋ ಮತ್ತು ಫೋಟೋಗಳನ್ನು ತೋರಿಸಿ ಬೆದರಿಸಿದ ಆರೋಪಿ, ಯುವತಿಯನ್ನು ಮನೆಗೆ ಕರೆಸಿಕೊಂಡು ಪುನಃ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಪೋಷಕರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !