ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಕ್ರಿಕೆಟ್‌ಗೆ ವಿದಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಇದೀಗ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದೇಶೀ ಕ್ರಿಕೆಟ್​​ನಲ್ಲಿ 14 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದ ಪ್ರಿಯಾಂಕ್ ಪಾಂಚಾಲ್ ವಿದಾಯ ಹೇಳಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ.

ಪ್ರಿಯಾಂಕ್ ಪಾಂಚಾಲ್ ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್‌ ಪರ ಆಡುತ್ತಿದ್ದರು. ಭಾರತ-ಎ ಪರ ಅದ್ಭುತ ಪ್ರದರ್ಶನ ನೀಡಿದ್ದ ಪ್ರಿಯಾಂಕ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಏನೋ ಸಿಕ್ಕಿತು. ಆದರೆ ಎಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ.

ತಮ್ಮ ನಿವೃತ್ತಿಯ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಪಾಂಚಾಲ್, ‘ಬೆಳೆಯುತ್ತಿರುವಾಗ ಎಲ್ಲರೂ ತಮ್ಮ ತಂದೆಯನ್ನೇ ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಕೂಡ ಇದರಿಂದ ಭಿನ್ನವಾಗಿರಲಿಲ್ಲ. ನಾನು ನನ್ನ ತಂದೆಯನ್ನು ಆರಾಧಿಸುತ್ತಾನೆ, ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ನನ್ನ ತಂದೆ ನನಗೆ ದೀರ್ಘಕಾಲೀನ ಶಕ್ತಿಯ ಮೂಲವಾಗಿದ್ದರು. ಅವರು ನನಗೆ ನೀಡಿದ ಶಕ್ತಿ, ನನ್ನ ಕನಸುಗಳನ್ನು ಅನುಸರಿಸಲು ಅವರು ನನ್ನನ್ನು ಪ್ರೋತ್ಸಾಹಿಸಿದ ರೀತಿ, ತುಲನಾತ್ಮಕವಾಗಿ ಸಣ್ಣ ಪಟ್ಟಣದಿಂದ ಎದ್ದು ಒಂದು ದಿನ ಭಾರತದ ಕ್ಯಾಪ್ ಧರಿಸಲು ಆಶಿಸುವ ಧೈರ್ಯವನ್ನು ಹೊಂದಲು ನಾನು ಪ್ರಭಾವಿತನಾಗಿದ್ದೆ. ಪ್ರಿಯಾಂಕ್ ಪಾಂಚಾಲ್ ಎಂಬ ನಾನು, ತಕ್ಷಣದಿಂದ ಜಾರಿಗೆ ಬರುವಂತೆ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!