ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿಯರಲ್ಲಿ ಬಿಕಿನಿ ಫೋಟೊಶೂಟ್ ಮಾಮೂಲು. ಆದರೆ ಕನ್ನಡದ ನಟಿಯರು ಈ ಸಾಹಸಕ್ಕೆ ಕೈ ಹಾಕೋದು ತುಂಬಾ ಕಡಿಮೆ.
ಈ ಹಿಂದೆ ನಟಿ ಐಂದ್ರಿತಾ ರೈ ಹಾಗೂ ಕಿರುತೆರೆ ನಟಿ ನಮ್ರತಾ ಗೌಡ ಬಿಕಿನಿ ತೊಟ್ಟು ಪೋಸ್ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಇಂಥದ್ದೇ ಫೋಟೊಶೂಟ್ ಒಂದನ್ನು ನಟಿ ಚೈತ್ರಾ ಜೆ ಆಚಾರ್ ಮಾಡಿದ್ದಾರೆ.
ಫೋಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ರೀತಿಯಲ್ಲೂ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುವ ನಟಿ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಡ್ಯಾನ್ಸ್, ಅಭಿನಯ ಎಂದು ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್ ಹಾಟ್ ಲುಕ್ನಲ್ಲಿ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದಕ್ಕೆ ನಟಿ ರುಕ್ಮಿಣಿ ವಸಂತ್, ರೇಚಲ್ ಮತ್ತಿತರ ನಟಿಯರು ಹಾಟ್ ಎಂದು ಕಮೆಂಟ್ ಮಾಡಿದ್ದಾರೆ.
View this post on Instagram