ಭಾರತಕ್ಕೆ ಮತ್ತೊಂದು ಹೆಗ್ಗುರುತು: ಆದಿತ್ಯ-L1 ಮಿಷನ್‌ ಸಕ್ಸಸ್‌ ಗೆ ಪ್ರಧಾನಿ ಮೋದಿ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು ‌15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ.ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು. ಶನಿವಾರ ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್‌ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್‌-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ.

ಇಸ್ರೋದ ಮಹತ್ವದ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ದೇಶದ ಜನತೆಯೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಜೊತೆಗೆ ಮಾನವ ಪ್ರಯೋಜನಗಳಿಗಾಗಿ ವಿಜ್ಞಾನದ ಅನ್ವೇಷಣೆಗಳನ್ನು ಮುಂದುವರಿಸುತ್ತೇವೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!