ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಕಳೆದ ವಾರ ಆಥಿಯಾ ಶೆಟ್ಟಿ ಮದುವೆ ಸಂಭ್ರಮಮ್ ಮುಗಿದಿದ್ದು, ಇದೀಗ ಮತ್ತೊಂದು ಮದುವೆಗೆ ಸಿದ್ಧವಾಗುತ್ತಿದೆ.
ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ದಾಂಪತ್ಯ ಜೀವನಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ. ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ.
ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ.
ಇನ್ನೂ ಕಿಯಾರಾ-ಸಿದ್ಧಾರ್ಥ್ ಮದುವೆ 100 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕರಣ್ ಜೋಹರ್, ಶಾಹಿದ್ ಕಪೂರ್ ದಂಪತಿ, ಮನೀಷ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ. ನೆಚ್ಚಿನ ಜೋಡಿಯ ಮದುವೆ ಸಂಭ್ರಮ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.