ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನಲ್ಲಿ ಮಿಂಚಿದ ನಟಿ ಶ್ರೀಲೀಲಾ ಇದೀಗ ಬಾಲಿವುಡ್ ನತ್ತ ಹಾರಿದ್ದು, ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ ಸಿನಿಮಾ ಮಾಡುತ್ತಿದ್ದಾರೆ.
ಈಗಾಗಲೇ ಇವರಿಬ್ಬರು ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಕಾರ್ತಿಕ್ ಆರ್ಯನ್ ಅವರು ಶ್ರೀಲೀಲಾ ಜೊತೆಗಿನ ಒಂದು ಫೋಟೋ ಹಂಚಿಕೊಂಡು ‘ತು ಮೇರಿ ಜಿಂದಗಿ ಹೈ’ (ನೀನೇ ನನ್ನ ಜೀವನ) ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇದೀಗ ಒಂದು ಕ್ಯಾಪ್ಷನ್ ಕಾರ್ತಿಕ್ ಕಾರ್ಯನ್ ಮತ್ತು ಶ್ರೀಲೀಲಾ ಅವರು ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಈ ಜೋಡಿಯ ಸಿನಿಮಾಗೆ ಅನುರಾಗ್ ಬಸು ಅವರು ನಿರ್ದೇಶನ ಮಾಡಲಿದ್ದಾರೆ. ‘ಆಶಿಕಿ 3’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗುವುದು ಎಂದು ಆರಂಭದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಆ ಟೈಟಲ್ ಪಡೆಯಲು ಕಾನೂನಿನ ತೊಡಕು ಉಂಟಾಗಿದ್ದರಿಂದ ಚಿತ್ರತಂಡ ಬೇರೆ ಟೈಟಲ್ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ. ಅಂತಿಮವಾಗಿ ಯಾವ ಶೀರ್ಷಿಕೆ ಫಿಕ್ಸ್ ಆಗಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
ಈ ಮೊದಲು ನಟಿ ಸಾರಾ ಅಲಿ ಖಾನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ತಳುಕು ಹಾಕಿಕೊಂಡಿತ್ತು. ಅವರಿಬ್ಬರು ಜೊತೆಯಾಗಿ ಸುತ್ತಾಡಿದ್ದರು. ಆದರೆ ನಂತರ ಅವರು ಬ್ರೇಕಪ್ ಮಾಡಿಕೊಂಡರು.