ಮಾಡೋದು ಹೇಗೆ?
ಮೊದಲು ಮಿಕ್ಸಿ ಜಾರಿಗೆ ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಅರಿಶಿಣ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಸ್ವಲ್ಪ ಕಾಯಿ ಹಾಗೂ ಪುದೀನ ಹಾಕಿ ಮಿಕ್ಸಿ ಮಾಡಿ. ಹೆಚ್ಚು ನೀರು ಹಾಕಬೇಡಿ
ನಂತರ ಪಾತ್ರೆಗೆ ಎಣ್ಣೆ, ಸಾಸಿವೆ ಜೀರಿಗೆ ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿದ ನಂತರ ಟೊಮ್ಯಾಟೊ ಹಾಕಿ ಅರಿಶಿಣ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಕ್ಯಾರೆಟ್, ಬೀನ್ಸ್,ಕ್ಯಾಪ್ಸಿಕಂ, ಕೋಸು, ನಿಮ್ಮಿಷ್ಟದ ಎಲ್ಲ ತರಕಾರಿ ಹಾಕಿ, ನಂತರ ಬಾಡಿಸಿ. ಆಮೇಲೆ ಇದಕ್ಕೆ ರುಬ್ಬಿದ ಮಸಾಲೆ ಹಾಕಿ. ಈ ಮಸಾಲೆ ಎಣ್ಣೆ ಬಿಡುವವರೆಗೂ ಬಾಡಿಸಿ, ನಂತರ ಬಿಸಿ ರೈಸ್ ಜೊತೆ ಮಿಕ್ಸ್ ಮಾಡಿದ್ರೆ ರುಚಿ ಅದ್ಭುತ