‘ದಿ ಕೇರಳ ಸ್ಟೋರಿ’ ಟೀಮ್ ನಿಂದ ಮತ್ತೊಂದು ಸಿನಿಮಾ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

‘ದಿ ಕೇರಳ ಸ್ಟೋರಿ’ (The Kerala Story) ದೇಶ ವಿದೇಶಗಳಲ್ಲಿ ಸದ್ದು ಮಾಡಿರುವ ಸಿನಿಮಾ.ಇದೀಗ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಸುದೀಪ್ತೋ ಸೇನ್ (Sudipto Sen) ಹಾಗೂ ಬಂಡವಾಳ ಹೂಡಿದ್ದ ವಿಪುಲ್​ ಅಮೃತ್​ಲಾಲ್​ ಶಾ ಅವರು ಮತ್ತೊಂದು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ.

ಹೌದು, ಇಬ್ಬರ ಕಾಂಬಿನೇಷನ್​ನಲ್ಲಿ ‘ಬಸ್ತರ್​’ (Bastar) ಎಂದು ಹೆಸರಿನ ಸಿನಿಮಾ ಮಾಡಿಬರಲಿದೆ. ಟೈಟಲ್​ ಪೋಸ್ಟರ್​ ಅನಾವರಣ ಮಾಡಲಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಬಾರಿ ಕೂಡ ಅವರಿಬ್ಬರು ಒಂದು ರಿಯಲ್​ ಲೈಫ್​ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಣ ಆಗಿದ್ದು ‘ಸನ್​ಶೈನ್​ ಪಿಕ್ಚರ್ಸ್​’ ಸಂಸ್ಥೆ ಮೂಲಕ. ಈಗ ‘ಬಸ್ತರ್​’ ಚಿತ್ರ ಕೂಡ ಇದೇ ಬ್ಯಾನರ್​ ಮೂಲಕ ಮೂಡಿಬರಲಿದೆ. ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ.

‘ಬಸ್ತರ್​’ ಪೋಸ್ಟರ್ ನಲ್ಲಿ ನಮಗೆ ದಟ್ಟ ಅರಣ್ಯದಲ್ಲಿ ಕೆಂಪು ಬಾವುಟ ಇದೆ. ನೆಲಕ್ಕೆ ಉರುಳಿದ ಮರ ಹೈಲೈಟ್​ ಆಗಿದೆ. ಗನ್​ ಮತ್ತು ಹೊಗೆ ಕೂಡ ಈ ಪೋಸ್ಟರ್​ನಲ್ಲಿ ಇದೆ. ‘ದೇಶದಲ್ಲಿ ಸಂಚಲನ ಮೂಡಿಸಲಿದೆ ಅಡಗಿದ ಸತ್ಯ’ ಎಂಬ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಈಗಲೇ ಅನೌನ್ಸ್​ ಮಾಡಲಾಗಿದೆ. 2024ರ ಏಪ್ರಿಲ್​ 5ರಂದು ‘ಬಸ್ತರ್​’ ತೆರೆಕಾಣಲಿದೆ ಎಂದು ಪೋಸ್ಟರ್​ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!