ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ಮುಡಾ ಹಗರಣದ ಬಾಂಬ್ ಸಿಡಿಸಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 434 ಎಕರೆ ಜಮೀನನ್ನು ಹೊಸ ಬಡವಾಣೆ ಮಾಡಲು ಡಿನೋಟಫಿಕೇಷ್ ಮಾಡಲಾಗುತ್ತದೆ.ಸರ್ವೆ ನಂಬರ್.17/4ರ ಜಮೀನು ಇದಾಗಿದೆ. ಈ ಜಮೀನು ಅರ್ಜಿ ಹಾಕಿದ 20 ದಿನಗಳಲ್ಲೇ ಡಿನೋಟಿಫಿಕೇಷನ್ ಆಗುತ್ತದೆ. ಸಾಕಮ್ಮ ಎಂಬುವರು ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಮಂಜೂರಾದಂತ ಜಮೀನನ್ನು ಸಿಎಂ ಸಿದ್ಧರಾಮಯ್ಯ ಖರೀದಿಸಿದ್ದಾರೆ ಎಂಬುದಾಗಿ ಮತ್ತೊಂದು ಮುಡಾ ಹಗರಣವನ್ನು ಬಯಲಿಗಿಟ್ಟಿದ್ದಾರೆ.
ಸಿಎಂ ಸಿದ್ಧರಾಮಯ್ಯ ಸತ್ಯ ಮೇವ ಜಯತೆ ಅಂತಾರೆ. ಹಾಗಾದ್ರೇ ಸಾಕಮ್ಮ ಎಂಬುವರ ಜಮೀನನ್ನು ಸಿಎಂ ಸಿದ್ಧರಾಮಯ್ಯ ಅವರು ಖರೀದಿ ಮಾಡಿದ್ದು ಏಕೆ ಎಂಬುದಾಗಿ ಪ್ರಶ್ನಿಸಿದ್ದಾರೆ.