ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಭಕ್ತಿ ಕಥಾಹಂದರ ಹೊಂದಿರುವ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ 10 ದಿನಗಳಲ್ಲಿ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಈ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ದೇಶಭಕ್ತಿಯ ಕಥೆ ಹೊಂದಿರುವ ಇನ್ನೊಂದು ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದೆ.
‘ಬಾರ್ಡರ್ 2’ ಸಿನಿಮಾದ ಟೀಸರ್ ಅನಾವರಣ ಆಗಿದೆ. ‘ಬಾರ್ಡರ್ 2’ ಚಿತ್ರದಲ್ಲಿ ವರುಣ್ ಧವನ್, ಅಹಾನ್ ಶೆಟ್ಟಿ, ದಿಲ್ಜಿತ್ ದೋಸಾಂಜ್, ಸನ್ನಿ ಡಿಯೋಲ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
‘ಬಾರ್ಡರ್’ ಸಿನಿಮಾ 1997ರಲ್ಲಿ ರಿಲೀಸ್ ಆಗಿತ್ತು. ಈಗ ಅದಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ‘ಬಾರ್ಡರ್ 2’ ಸಿನಿಮಾಗೆ ಅನುರಾಗ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. 1971ರಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಯುದ್ಧದ ಘಟನೆಗಳನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಸಿದ್ಧವಾಗಿದೆ.
https://www.youtube.com/watch?v=nvmc2ECk8Lo
2 ನಿಮಿಷ 4 ಸೆಕೆಂಡ್ ಇರುವ ‘ಬಾರ್ಡರ್ 2’ ಟೀಸರ್ನಲ್ಲಿ ಯುದ್ಧದ ಸನ್ನಿವೇಶಗಳೇ ತುಂಬಿಕೊಂಡಿವೆ. ‘ಕೇಸರಿ’, ‘ಪಂಜಾಬ್ 1984’ ಸಿನಿಮಾಗಳ ಖ್ಯಾತಿಯ ಅನುರಾಗ್ ಸಿಂಗ್ ಅವರು ‘ಬಾರ್ಡರ್ 2’ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಮೂಡಿದೆ. ಗಣರಾಜ್ಯೋತ್ಸವದ ಪ್ರಯುಕ್ತ 2026ರ ಜನವರಿ 23ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.
ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಜೆ.ಪಿ. ದತ್ತ, ನಿಧಿ ದತ್ತ ಅವರು ‘ಬಾರ್ಡರ್ 2’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

