October 6, 2026
Tuesday, October 6, 2026
spot_img

ಕಾಲಿವುಡ್‌ನಲ್ಲಿ ಮತ್ತೊಂದು ಪೊಲಿಟಿಕಲ್ ಧಮಾಕಾ: ದಳಪತಿ ವಿಜಯ್ ಹಾದಿಯಲ್ಲೇ ನಟ ಧನುಷ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ಅವರ ಹಾದಿಯಲ್ಲೇ ನಟ ಧನುಷ್ ಕೂಡ ತಮಿಳುನಾಡು ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ? ಹೀಗೊಂದು ಹೊಸ ಪ್ರಶ್ನೆ ಕಾಲಿವುಡ್ ಸಿನಿರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಧನುಷ್ ಅಭಿಮಾನಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು ಈ ಅನುಮಾನಗಳಿಗೆ ನೇರ ಕಾರಣವಾಗಿವೆ.

ಸಿನಿಮಾದಿಂದ ಸಮಾಜ ಸೇವೆಯತ್ತ ಧನುಷ್ ಗಮನ

ಅಭಿಮಾನಿ ಸಂಘ ಆಯೋಜಿಸಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಸಾಗರಾದಿ ಸಾಗರವಾಗಿ ಹರಿದುಬಂದ ಜನಸ್ತೋಮವನ್ನು ಕಂಡು ಧನುಷ್ ಹರ್ಷ ವ್ಯಕ್ತಪಡಿಸಿದರು. ಕೇವಲ ಚಲನಚಿತ್ರಗಳ ಆಡಿಯೋ ರಿಲೀಸ್ ಹಾಗೂ ಅಭಿಮಾನಿಗಳ ಸಮಾವೇಶಕ್ಕೆ ಸೀಮಿತವಾಗಬೇಡಿ ಎಂದು ಕಿವಿಮಾತು ಹೇಳಿದರು. ಈ ಒಗ್ಗಟ್ಟಿನ ಶಕ್ತಿಯನ್ನು ಸಮಾಜದ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ನೇರ ಕರೆ ನೀಡಿದರು.

ಹೊಸ ಧ್ವಜ ಅನಾವರಣ: ಅನುಮಾನ ಇನ್ನಷ್ಟು ಬಲ

ನಿಮ್ಮ ಸುತ್ತಮುತ್ತಲಿನ ಜನರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಿ, ಸ್ಥಳೀಯರ ಅಗತ್ಯಗಳನ್ನು ಪೂರೈಸಿ ಎಂದು ಧನುಷ್ ಅಭಿಮಾನಿ ಬಳಗಕ್ಕೆ ಸೂಚಿಸಿದರು. ಇದೇ ವೇದಿಕೆಯಲ್ಲಿ ಅವರು ತಮ್ಮ ಅಭಿಮಾನಿ ಸಂಘದ ಹೊಸ ಧ್ವಜವನ್ನು ಅನಾವರಣಗೊಳಿಸಿದ್ದು, ಅವರ ರಾಜಕೀಯ ಪ್ರವೇಶದ ಮುನ್ಸೂಚನೆಯೇ ಎಂಬ ಕುತೂಹಲವನ್ನು ಸಾರ್ವಜನಿಕರಲ್ಲಿ ದ್ವಿಗುಣಗೊಳಿಸಿದೆ.

Must Read