ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರಾ ಗೌಡ, ದರ್ಶನ್ ಹಾಗೂ ವಿಜಯಲಕ್ಷ್ಮಿ ಟ್ರೈಯಾಂಗಲ್ ಕಥೆ ಮತ್ತೆ ಮುಂದುವರಿದಿದೆ.
ವಿಜಯಲಕ್ಷ್ಮಿ ನಮ್ಮ ಫ್ಯಾಮಿಲಿ ಎಂದು ಪೋಸ್ಟ್ ಮಾಡಿದಂತೆ ತಿರುಗೇಟಿನ ರೀತಿ ಪವಿತ್ರಾ ಗೌಡ ದರ್ಶನ್ ಹಾಗೂ ಅವರ ವಿಡಿಯೋ ಹಾಕಿ 10 ವರ್ಷದ ಆನಿವರ್ಸರಿ ಎಂದು ಹೇಳಿಕೊಂಡಿದ್ದರು.
ಅದಕ್ಕೆ ಮರುಪೋಸ್ಟ್ ಮಾಡಿದ ವಿಜಯಲಕ್ಷ್ಮಿ, ಪವಿತ್ರಾಗೆ ಅಜೆಂಡಾ ಇದೆ, ಬೇರೆಯವರ ಗಂಡನನ್ನು ನನ್ನ ಗಂಡ ಎಂದು ಹೇಳಿದ್ದಾರೆ ಎಂದಿದ್ದರು. ಇದೇ ಎಪಿಸೋಡ್ ಮತ್ತೆ ಮುಂದುವರಿದಿದೆ.
ಪವಿತ್ರಾ ಗೌಡ ಮಗಳು ಖುಷಿ ದರ್ಶನ್ ಮಗಳು ಎನ್ನುವ ರೂಮರ್ಸ್ ಎದುರಾಗಿದ್ದು, ಈ ಬಗ್ಗೆ ಪವಿತ್ರಾ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಖುಷಿ ನಾನು ಹಾಗೂ ನನ್ನ ಮಾಜಿ ಪತಿ ಸಂಜಯ್ ಮಗಳು ಎಂದು ಹೇಳಿದ್ದಾರೆ.
View this post on Instagram