ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 18 ಹಳ್ಳಿಗಳ 200ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಂಡುಬಂದಿತ್ತು. ಈಗ ಉಗುರು ಉದುರುವ ಮತ್ತೊಂದು ಸಮಸ್ಯೆ ಎದುರಾಗಿದೆ.
ಇದೇ ಹಳ್ಳಿಯಲ್ಲಿ ಈಗ ಕೂದಲು ಉದುರಿದ ಜನರಿಗೆ ಉಗುರುಗಳು ಕೂಡ ಉದುರುತ್ತಿದೆ ಎಂದು ಹೇಳಲಾಗಿದೆ. ಉಗುರುಗಳು ಹಾನಿಗೊಳಗಾಗಿ ಉದುರಿ ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು, ನಂತರ ಜಿಲ್ಲಾ ಆರೋಗ್ಯ ಇಲಾಖೆಯ ಕೆಲವು ನೌಕರರು ಅಲ್ಲಿಗೆ ತಲುಪಿ ರಕ್ತದ ಮಾದರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ದೇಹದಲ್ಲಿ ಸೆಲೆನಿಯಮ್ ಮಟ್ಟ ಹೆಚ್ಚಾಗುವುದೇ ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಕೂದಲು ಉದುರುವಿಕೆಯ ನಂತರ, ಉಗುರುಗಳಿಗೆ ಹಾನಿಯಾಗುವುದು ಆರೋಗ್ಯ ಇಲಾಖೆಗೆ ಮತ್ತೆ ಸವಾಲಾಗಿ ಪರಿಣಮಿಸಿದೆ.