ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಶೀಘ್ರದಲ್ಲೇ ಪುಲ್ವಾಮಾ ರೀತಿಯ ದಾಳಿ ನಡೆಯಲಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ವಿದ್ಯಾರ್ಥಿಯೊಬ್ಬನನ್ನು ಬುಧವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಜಾರ್ಖಂಡ್‌ನ ವಿದ್ಯಾರ್ಥಿ, ‘ಶೀಘ್ರದಲ್ಲೇ ಪುಲ್ವಾಮಾ ರೀತಿಯ ದಾಳಿ ನಡೆಯಲಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಎಂದು ವಿವರಗಳು ಹೇಳುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕೂಡ ದಾಖಲಾಗಿದ್ದು, ಆರೋಪಿ ವಿದ್ಯಾರ್ಥಿಯೊಂದಿಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ ಮತ್ತು ತಂಡವು ವಿಚಾರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಖಚಿತಪಡಿಸಲಾಗಿದೆ.
ಯುವಕ ತನ್ನ ಎಕ್ಸ್ ಖಾತೆಯಲ್ಲಿ “ಬಹುತ್ ಜಲ್ದ್ ಇನ್ ಶಾ ಅಲ್ಲಾಹ್ ದುಸ್ರಾ ಪುಲ್ವಾಮಾ ಭಿ ಹೋಗಾ” (ಇನ್ಶಾ ಅಲ್ಲಾಹ್, ಶೀಘ್ರದಲ್ಲೇ ಮತ್ತೊಂದು ಪುಲ್ವಾಮಾ ದಾಳಿ ನಡೆಯಲಿದೆ ) ಎಂದು ಬರೆದುಕೊಂಡಿದ್ದಾನೆ