ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಮಳೆ ಇನ್ನಷ್ಟು ಬಿರುಸು ಪಡೆದಿದ್ದು, ಈ ನಡುವೆ ವಿದ್ಯುತ್ ತಂತಿ ಕಡಿದು ಮೈಲೇಲೆ ಬಿದ್ದು ಮಂಗಳೂರಿನ ರೊಸಾರಿಯೋ ಬಳಿ ಇಬ್ಬರು ಆಟೋ ಚಾಲಕರು ದಾರುಣ ಸಾವನ್ನಪ್ಪಿದ್ದಾರೆ.
ಈ ಘಟನೆ ಬುಧವಾರ ರಾತ್ರಿ ನಡೆದಿದ್ದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ (46) ಹಾಗೂ ಸಕಲೇಶಪುರದ ಪಾಲ್ಯ ನಿವಾಸಿ ರಾಜು (50) ಸಾವನ್ನಪ್ಪಿದವರು.
ಇವರು ರೋಸಾರಿಯೋ ಶಾಲೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ರಿಕ್ಷಾ ಆಟೋ ತೊಳೆಯುತ್ತಿರುವ ಸಮಯ ವಿದ್ಯುತ್ ತಂತಿ ಒಬ್ಬರ ಮೇಲೆ ಕಡಿದು ಬಿದ್ದಿದೆ. ಈ ವೇಳೆ ರಕ್ಷಿಸಲು ಹೋದ ಮತ್ತೊಬ್ಬರಿಗೂ ವಿದ್ಯುತ್ ಶಾಕ್ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.