ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಟಾಟಾ ಐಪಿಎಲ್ 2025 ಸೀಸನ್ ಅಂದ್ರೆ ನಿಜಕ್ಕೂ ದಾಖಲೆಗಳ ಹಬ್ಬ. ಡಿಜಿಟಲ್ ಮತ್ತು ಟಿವಿ ವೇದಿಕೆಗಳೆರಡರಲ್ಲೂ ಜಿಯೋಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ವೀಕ್ಷಣಾ ಸಮಯದೊಂದಿಗೆ ಹೊಸ ದಾಖಲೆ ಮಾಡಿದೆ.
ಡಿಜಿಟಲ್ ಕಡೆ ನೋಡಿದ್ರೆ ಜಿಯೋಹಾಟ್‌ಸ್ಟಾರ್ ಮಾತ್ರ 23.1 ಬಿಲಿಯನ್ ವೀಕ್ಷಣೆ, 384.6 ಬಿಲಿಯನ್ ನಿಮಿಷಗಳ ವೀಕ್ಷಣೆಯನ್ನೇ ದಾಖಲಿಸಿದೆ! ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಪೂರ್ತಿ 29% ಏರಿಕೆಯಾಗಿದೆ. ವಿಶೇಷವಾಗಿ ಕನೆಕ್ಟೆಡ್ ಟಿವಿ ಬಳಕೆ 49%, ಏರಿದೆ. ಅಂದರೆ ಮನೆ ಟಿವಿಯಲ್ಲಿ ಆಪ್‌ಗಳ ಮೂಲಕ ಕ್ರಿಕೆಟ್ ನೋಡೋ ಪ್ರೇಕ್ಷಕರ ಸಂಖ್ಯೆಯೂ ಜೋರಾಗಿದೆ.
ಟಿವಿ ಕಡೆ ನೋಡಿದ್ರೆ, ಸ್ಟಾರ್ ಸ್ಪೋರ್ಟ್ಸ್ 456 ಬಿಲಿಯನ್ ನಿಮಿಷಗಳ ವೀಕ್ಷಣೆಯೊಂದಿಗೆ, ಟಿವಿ ರೇಟಿಂಗ್‌ಗಳ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ವೈವಿಧ್ಯಮಯ ಆವೃತ್ತಿಗಳ ಮೂಲಕ, ಎಲ್ಲ ವಯಸ್ಸಿನ, ಪ್ರದೇಶದ ಜನರಿಗೆ ತಕ್ಕ ಅನುಭವ ಕೊಟ್ಟಿದೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಒಟ್ಟು 31.7 ಬಿಲಿಯನ್ ನಿಮಿಷಗಳ ವೀಕ್ಷಣೆ (ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋಹಾಟ್‌ಸ್ಟಾರ್ ಒಳಗೊಂಡಂತೆ) ದಾಖಲಾಗಿದ್ದು, ಇದು ಟಿ-20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ 892 ಮಿಲಿಯನ್ ವೀಡಿಯೋ ವೀಕ್ಷಣೆ, 55 ಮಿಲಿಯನ್ ಪೀಕ್ ಕನ್‌ಕರನ್ಸಿ — ಇವು ಎಲ್ಲವೂ ಡಿಜಿಟಲ್ ಇತಿಹಾಸದ ದಾಖಲೆಯೇ.