ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆಲ ತಿಂಗಳ ಹಿಂದಷ್ಟೆ ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿಯೊಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿತ್ತು. ಅದರ ಹಿಂದೆಯೇ ಸಾಕಷ್ಟು ವಿವಾದವನ್ನು ಸಹ ಇದು ಆಕರ್ಷಿಸಿತ್ತು.
ತಮ್ಮ ಸಿನಿಮಾದ ಕೆಲವು ದೃಶ್ಯಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಬಳಸಲಾಗಿದೆ ಅಂತ ನಟ ಧನುಷ್ ನೋಟಿಸ್ ನೀಡಿದ್ದರು. ಐದು ಕೋಟಿ ರೂಪಾಯಿ ಪರಿಹಾರ ಕೂಡ ಕೇಳಿದ್ದರು. ಆ ಕೇಸ್ ಇನ್ನೂ ಕೋರ್ಟ್ ನಲ್ಲಿ ಇದೆ.
ಇದೀಗ ಅದೇ ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಮತ್ತೊಂದು ಸಿನಿಮಾ ಟೀಮ್ ನಿಂದ ನಯನತಾರಾಗೆ ನೋಟಿಸ್ ಕಳುಹಿಸಲಾಗಿದೆ. ಆಪ್ತಮಿತ್ರ ಸಿನಿಮಾದ ರಿಮೇಕ್ ಚಂದ್ರಮುಖಿ ಸಿನಿಮಾದ ಕೆಲವು ದೃಶ್ಯಗಳನ್ನು ನಯನತಾರಾ ಅವರ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವ ಕಾರಣಕ್ಕಾಗಿ ನಿರ್ಮಾಣ ಸಂಸ್ಥೆಯು ನೋಟಿಸ್ ಕೊಟ್ಟಿದೆ. ಐದು ಕೋಟಿ ರೂಪಾಯಿ ಪರಿಹಾರ ಕೊಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.