ಗ್ರಾಹಕರಿಗೆ ಮತ್ತೊಂದು ಶಾಕ್: ಜನಪ್ರಿಯ ಡೈರಿ ಬ್ರಾಂಡ್ ದರ ಎರಡು ರೂಪಾಯಿ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಅಮುಲ್ ಹಾಲಿನ ದರ ಕೂಡ ಎರಡು ರೂಪಾಯಿ ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ತಿಳಿಸಿದೆ.

ಕಳೆದ ವರ್ಷವಷ್ಟೇ ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. 2025 ರ ಜನವರಿಯಲ್ಲಿ, 1 ಲೀಟರ್ ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳಿಗೆ ಅನ್ವವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!