ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಟರ್ಕಿ, ಅಜರ್‌ಬೈಜಾನ್ ವಿರುದ್ಧ ಭಾರತೀಯರು ಬಹಿಷ್ಕಾರ ಅಭಿಯಾನ ಮಾಡುತ್ತಿದ್ದು, ಇತ್ತ ಸರ್ಕಾರ ಕೂಡ ಹಲವು ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ.
ಬೆಂಗಳೂರಿನ ವೋಲ್‌ಸೇಲ್ ಕ್ಲೋತ್ ಮರ್ಚೆಂಟ್ ಅಸೋಸಿಯೇಶನ್ ಈ ನಿರ್ಧಾರ ಘೋಷಿಸಿದೆ. ಬೆಂಗಳೂರಿನ ಬಟ್ಟೆ ವ್ಯಾಪಾರಿಗಳ ಸಂಘ ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದು ನಿಲ್ಲಿಸಿದೆ. ಎರಡು ರಾಷ್ಟ್ರಗಳಿಂದ ಯಾವುದೇ ವ್ಯಾಪಾರ ಮಾಡಿಕೊಳ್ಳುವುದಿಲ್ಲ ಎಂದಿದೆ.
ಈ ಕುರಿತು ಮಾತನಾಡಿದ ಬೆಂಗಳೂರು ಬಟ್ಟೆ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಪ್ರಕಾಶ್ ಪಿರಾಗಲ್, ದೇಶದ ಹಿತಾಸಕ್ತಿ ಮುಖ್ಯ. ಭಾರತದ ವಿರುದ್ದ ಪ್ರವರ್ತಿಸಿದ ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಯಾವುದೇ ವ್ಯಾಪಾರ ವಹಿವಾಟು ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.
ಬೆಂಗಳೂರು ಬಟ್ಟೆ ವ್ಯಾಪಾರಿಗಳ ಸಂಘದಡಿ ಬರೋಬ್ಬರಿ 3,000ಕ್ಕೂ ಹೆಚ್ಚು ಬಟ್ಟೆ ವ್ಯಾಪಾರಿಗಳಿದ್ದಾರೆ. ಈ ಮೂಲಕ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಟರ್ಕಿ ಹಾಗೂ ಅಜರ್‌ಬೈಜಾನ್ ಜೊತೆ ನಡೆಸುತ್ತಿದೆ. ಆದರೆ ಭಾರತದ ವಿರುದ್ಧವೇ ಪ್ರವರ್ತಿಸಿದ ಈ ಎರಡು ರಾಷ್ಟ್ರಗಳ ಜೊತೆ ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿರ್ಧರಿಸಿದ್ದೇವೆ ಎಂದಿದ್ದಾರೆ.