April 13, 2026
Monday, April 13, 2026
spot_img

ಮಧ್ಯಪ್ರಾಚ್ಯಕ್ಕೆ‌ ಮತ್ತೊಂದು ಶಾಕ್: ಇಸ್ರೇಲ್‌ಗೆ 12 ಸಾವಿರ ವೈಮಾನಿಕ ಬಾಂಬ್‌ ಪೂರೈಕೆಗೆ ಟ್ರಂಪ್‌ ಗ್ರೀನ್ ಸಿಗ್ನಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಹೆಚ್ಚುತ್ತಲ್ಲೇ ಇದ್ದು, ಈ ನಡುವೆ ಇಸ್ರೇಲ್‌ಗೆ ತುರ್ತು ಅಗತ್ಯ ಇರುವ 151.8 ದಶಲಕ್ಷ ಡಾಲರ್‌ ಮೌಲ್ಯದ 12 ಸಾವಿರ ವೈಮಾನಿಕ ಬಾಂಬ್‌ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ.

ಯುದ್ಧದ ನಿರ್ವಹಣೆಗೆ ತುರ್ತಾಗಿ ವೈಮಾನಿಕ ಬಾಂಬ್‌ಗಳನ್ನು ಮಾರಾಟ ಮಾಡಲು ಟ್ರಂಪ್‌ ಆಡಳಿತ ಅನುಮತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮಾರ್ಕೊ ರುಬಿಯೊ, ಬಾಂಬ್‌ ಕೇಸಿಂಗ್‌ ಮಾರಾಟ ಇಸ್ರೇಲ್‌ಗೆ ಸದ್ಯದ ಯುದ್ಧ ನಿರ್ವಹಿಸುವ ಜತೆಗೆ ಭವಿಷ್ಯದ ಬೆದರಿಕೆ ಎದುರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಇರಾನ್‌ ವಿರುದ್ಧ ಅಮೆರಿಕ, ಇಸ್ರೇಲ್‌ ಘೋಷಿಸಿರುವ ಸಮರ ಎರಡನೇ ವಾರಕ್ಕೆ ಕಾಲಿರಿಸಿದ್ದು, ದಾಳಿ- ಪ್ರತಿದಾಳಿ ಮುಂದುವರಿದಿದೆ. ಇರಾನ್‌- ಅಮೆರಿಕ ಸಂಘರ್ಷದಲ್ಲಿ ಸಾವಿನ ಸಂಖ್ಯೆ 1,600ರ ಗಡಿ ದಾಟಿದೆ. ಇರಾನ್‌ ಒಂದರಲ್ಲೇ 1,350 ಜನ ಬಲಿಯಾಗಿದ್ದು, ಸಾವಿರಾರು ನಾಗರಿಕರು ಗಾಯಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !