May 10, 2026
Sunday, May 10, 2026
spot_img

ಮ್ಯಾಚ್ ನೋಡೋಕೆ ಬಂದ್ರಾ, ಮೊಬೈಲ್ ನೋಡೋಕಾ? ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ‘ಬೆಬೊ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಜ್ವರ ದೇಶಾದ್ಯಂತ ಏರಿದ್ದು, ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಗ್ಯಾಲರಿಯಲ್ಲಿ ಹಲವು ಗಣ್ಯರು ಕಾಣಿಸಿಕೊಂಡು ಸಂಭ್ರಮಿಸಿದರು. ಆದರೆ, ಇವೆಲ್ಲದರ ನಡುವೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಅವರು ತಮ್ಮ ನಡೆಯಿಂದಲೇ ಭಾರಿ ಸುದ್ದಿಯಲ್ಲಿದ್ದಾರೆ.

ಮಕ್ಕಳಾದ ತೈಮೂರ್ ಮತ್ತು ಜೇ ಜೊತೆ ಪಂದ್ಯ ವೀಕ್ಷಿಸಲು ಬಂದಿದ್ದ ಕರೀನಾ, ಮೈದಾನದಲ್ಲಿ ನಡೆಯುತ್ತಿದ್ದ ಆಟಕ್ಕಿಂತ ಹೆಚ್ಚಾಗಿ ತಮ್ಮ ಮೊಬೈಲ್ ಫೋನ್‌ನಲ್ಲೇ ಮುಳುಗಿದ್ದರು. ಪಕ್ಕದಲ್ಲೇ ಮಕ್ಕಳು ಜ್ಯೂಸ್ ಕುಡಿಯುತ್ತಾ ಮಜಾ ಮಾಡುತ್ತಿದ್ದರೂ, ಕರೀನಾ ಮಾತ್ರ ಯಾವುದೋ ಗಂಭೀರ ಚರ್ಚೆಯಲ್ಲಿರುವಂತೆ ಫೋನ್ ನೋಡುತ್ತಾ ಕುಳಿತಿದ್ದರು. “ಲಕ್ಷಾಂತರ ಜನ ಮೈದಾನದಲ್ಲಿ ಕುಳಿತು ಪಂದ್ಯ ನೋಡಲು ಹಂಬಲಿಸುತ್ತಾರೆ, ಇವರಿಗೆ ಇಂತಹ ಅವಕಾಶ ಸಿಕ್ಕರೂ ಫೋನ್ ನೋಡುವುದೇ ಆಯಿತು” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇನ್ನು ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನೀಲಿ ಜರ್ಸಿ ಧರಿಸಿ ಮಿಂಚಿದ್ದ ಕರೀನಾ, ಕ್ರೀಡಾಂಗಣದಿಂದ ಹೊರಬರುವಾಗ ಮಾತ್ರ ಸಾಮಾನ್ಯ ಶರ್ಟ್ ಧರಿಸಿದ್ದರು. ತಂಡದ ಸೋಲಿನ ಭೀತಿಯಿಂದ ಅಥವಾ ಅಭಿಮಾನಿಗಳ ಟ್ರೋಲ್‌ನಿಂದ ತಪ್ಪಿಸಿಕೊಳ್ಳಲು ಅವರು ಹೀಗೆ ಜರ್ಸಿ ಬದಲಿಸಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಒಟ್ಟಿನಲ್ಲಿ, ಪಂದ್ಯದ ಫಲಿತಾಂಶಕ್ಕಿಂತಲೂ ಹೆಚ್ಚಾಗಿ ಕರೀನಾ ಕಪೂರ್ ಅವರ ಈ ವರ್ತನೆಯೇ ಈಗ ಎಲ್ಲೆಡೆ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !