ಪುಷ್ಪ ಸೀಕ್ವೆಲ್‌ಗೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಷ್ಪ-2 ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಪುಷ್ಪ ಸಿನಿಮಾ ಮೂಲಕ ಕೋಟಿ ಕೋಟಿ ಬಾಚಿದ ಚಿತ್ರತಂಡ ಇದೀಗ ಪುಷ್ಪ ಸೀಕ್ವೆಲ್‌ಗೆ ಮತ್ತೊಬ್ಬ ಸ್ಟಾರ್ ನಟನನ್ನು ಕರೆತಂದಿದೆ.

ಈಗಾಗಲೇ ಪಾರ್ಟ್-1ಗಿಂತ ಪಾರ್ಟ್-2 ಚೆನ್ನಾಗಿರುತ್ತದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಈ ಹಿಂದೆ ರಾಜಮೌಳಿ ಕೂಡ ಸುಕುಮಾರ್ ಸಿನಿಮಾದಲ್ಲಿ ಈ ನಟ ಇದ್ದರೆ ಸಿನಿಮಾ ಸೂಪರ್ ಹಿಟ್ ಎಂದು ಹೇಳಿದ್ದರು.
Ram Charan's connect with Allu Arjun's Pushpaಅವರು ಬೇರೆ ಯಾರೂ ಅಲ್ಲ, ರಾಮ್‌ಚರಣ್. ಹೌದು, ಪುಷ್ಪ-2ಗೆ ರಾಮ್‌ಚರಣ್ ಎಂಟ್ರಿ ನೀಡಿದ್ದಾರೆ. ರಾಮ್‌ಚರಣ್ ಪುಷ್ಪ ಕ್ಲೈಮಾಕ್ಸ್‌ನಲ್ಲಿ ಎಂಟ್ರಿ ನೀಡಲಿದ್ದಾರೆ. ಪುಷ್ಪ-2 ಮೂಲಕ ಸಿನಿಮಾ ಮುಗಿಯಲಿದೆ.

Ram Charan Reaction On Pushpa Movie In Twitter- Sakshiಕೊನೆಯಲ್ಲಿ ರಾಮ್‌ಚರಣ್ ಎಂಟ್ರಿ ಯಾಕೆ? ಇದು ಕೊನೆಯಲ್ಲ, ಇನ್ನೊಂದು ಸಿನಿಮಾದ ಮೊದಲ ಭಾಗ. ಹೌದು, ರಾಮ್‌ಚರಣ್ ಇನ್ನೊಂದು ಸಿನಿಮಾವನ್ನು ಸುಕುಮಾರ್ ಡೈರೆಕ್ಟ್ ಮಾಡುತ್ತಿದ್ದು, ರಾಮ್‌ಚರಣ್ ಮೂಲ ಈ ಸಿನಿಮಾದಿಂದ ಆರಂಭವಾಗುತ್ತದೆ. ಹಾಗಾಗಿ ಮುಂದಿನ ಸಿನಿಮಾ ಕೂಡ ತಲೆಯಲ್ಲಿ ಇಟ್ಟುಕೊಂಡು ಸುಕುಮಾರ್ ರಾಮ್‌ಚರಣ್ ಎಂಟ್ರಿ ಕೊಡಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!