ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದೆ, ಅಂತೆಯೇ ವಿದ್ಯುತ್ ಬಿಲ್ ದರವೂ ಏರಿಕೆಯಾಗಿದೆ. ಎಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ದರ ಏರಿಕೆ ಬಿಸಿ ತಟ್ಟಿದ್ದು, ಬಿಲ್ ಹೆಚ್ಚು ಬರುತ್ತಿರುವ ಪ್ರಕರಣಗಳು ಆಗಾಗ್ಗೆ ಕಾಣಿಸುತ್ತಲೇ ಇದೆ.
ಇದೀಗ 1 ಬಿಎಚ್‌ಕೆ ಮನೆಗೆ ನಾಲ್ಕು ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ, ಹೌದು, ಬಳ್ಳಾರಿಯ ಇಂದಿರಾ ನಗರ ನಿವಾಸಿ ಮಹೇಶ್ ಸಿಂಗಲ್ ಬೆಡ್‌ರೂಂ ಮನೆಗೆ ನಾಲ್ಕು ಲಕ್ಷ ರೂಪಾಯಿ ಬಿಲ್ ಬಂದಿದ್ದು, ಮಹೇಶ್ ಶಾಕ್ ಆಗಿದ್ದಾರೆ. ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಹೋದಾಗಲೂ 4,25,852 ರೂಪಾಯಿ ಬಿಲ್ ಕಾಣಿಸಿದೆ. ಈ ಬಗ್ಗೆ ಮಹೇಶ್ ದೂರು ನೀಡಿದ ನಂತರ ಬಿಲ್ ಸರಿಯಾಗಿದ್ದು, 885ರೂಪಾಯಿಗಳನ್ನು ಮಹೇಶ್ ಕಟ್ಟಿದ್ದಾರೆ.