ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಇನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೃಪತುಂಗ ರಸ್ತೆಯಲ್ಲಿ ನಡೆದಿದೆ.
ಇನೋವಾ ಕಾರು 2 ಬೈಕ್ ಹಾಗೂ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ.
ಇನ್ನು ಬೈಕ್ ನಲ್ಲಿ ತೆರಳುತ್ತಿದ್ದ ಎಚ್‌ಎಸ್‌ಆರ್ ಲೇಔಟ್ ನಿವಾಸಿ 39 ವರ್ಷದ ಮಾಜಿದ್ ಖಾನ್ ಎಂಬಾತ ಮೃತಪಟ್ಟಿದ್ದರೆ ಬೈಕ್ ಹಿಂಬದಿ ಕುಳಿತಿದ್ದ ರಿಯಾಜ್ ಕಾಲು ಮುರಿದಿದೆ. ಇನ್ನು ಗಾಯಾಳು ರಿಯಾಜ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಸರಣಿ ಅಪಘಾತದಿಂದಾಗಿ ನೃಪತುಂಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು.