ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಹುಣಸೆಹುಳಿ
ಮೆಂತ್ಯೆ
ಜೀರಿಗೆ
ಕೊತ್ತಂಬರಿ
ಕರಿಬೇವು
ಕಡ್ಲೆಕಾಳು ಅಥವಾ ಶೇಂಗಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಬಾಡಿಸಿ
ನಂತರ ಈರುಳ್ಳಿ ಹಸಿಮೆಣಸು ಉಪ್ಪು ಹಾಕಿ ಬಾಡಿಸಿ
ನಂತರ ಇನ್ನೊಂದು ಪ್ಯಾನ್ನಲ್ಲಿ ಮೊದಲು ಶೇಂಗಾ ಅಥವಾ ಕಡ್ಲೆಕಾಳು ಹುರಿದುಕೊಳ್ಳಿ
ನಂತರ ಅದೇ ಪ್ಯಾನ್ಗೆ ಹತ್ತು ಕಾಳು ಮೆಂತ್ಯೆ ಒಂದು ಸ್ಪೂನ್ ಜೀರಿಗೆ ಬಿಸಿ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಕೊತ್ತಂಬರಿ, ಕರಿಬೇವು ಹಾಕಿ ಬಾಡಿಸಿ, ಹುಣಸೆಹುಳಿ ಹಾಕಿ
ನಂತರ ಜೀರಿಗೆ ಪುಡಿ ಹಾಕಿ ಬಾಡಿಸಿ ಅನ್ನ ಮಿಕ್ಸ್ ಮಾಡಿ.