ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಟೈಟಲ್‌ಗಾಗಿ ವಾರ್ ಆರಂಭವಾಗಿದೆ. ನಿನ್ನೆಯಷ್ಟೇ ನಾಗಾಭರಣ ನಿರ್ದೇಶನದಲ್ಲಿ ನಾಡಪ್ರಭು ಕೆಂಪೇಗೌಡ ಸಿನಿಮಾ ಅನೌನ್ಸ್ ಆಗಿತ್ತು. ಇದಕ್ಕೆ ಡಾಲಿ ಧನಂಜಯ ಹೀರೋ, ಈ ಸಿನಿಮಾ ಟೈಟಲ್ ನಮ್ಮದು ಎಂದು ನಿರ್ಮಾಪಕ ಕಿರಣ್ ತೋಟಂಬೈಲ್ ಠಾಣೆ ಮೆಟ್ಟಿಲೇರಿದ್ದಾರೆ.
ಕಿರಣ್ ಅವರು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಹೆಸರಿನ ಸಿನಿಮಾ ಘೋಷಣೆ ಮಾಡಿ ಕೆಲವು ತಿಂಗಳು ಕಳೆದಿದೆ. ನಿರ್ದೇಶಕ ಬಾಬು ಅವವರು ಈ ಚಿತ್ರವನ್ನು ನಿರ್ದೇನ ಮಾಡುತ್ತಿದ್ದಾರೆ. ಇತ್ತ, ನಾಗಾಭರಣ ಅವರು ‘ನಾಡಪ್ರಭು ಕೆಂಪೇಗೌಡ’ ಟೈಟಲ್ ರಿಜಿಸ್ಟರ್ ಮಾಡಿಸಿ, ಸಿನಿಮಾ ಘೋಷಿಸಿದ್ದಾರೆ. ಇದಕ್ಕೆ ಡಾಲಿ ಧನಂಜಯ್ ಹೀರೋ.
ನಾಡಪ್ರಭು ಕೆಂಪೇಗೌಡ ಕಾಪಿರೈಟ್ಸ್ ನಮ್ಮದು ಎಂದು ನಾಗಾಭರಣ ಹೇಳಿಕೊಂಡಿದ್ದಾರೆ. ಜೊತೆಗೆ ಕಿರಣ್ ಅವರಿಗೆ ನಿರ್ಬಂಧಕ ನೋಟಿಸ್ ಕಳುಹಿಸಿದ್ದಾರೆ. ಜೂನ್ 27 ಕ್ಕೆ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರದ ಮುಹೂರ್ತ ಸಮಾರಂಭ ಇಟ್ಟುಕೊಳ್ಳಲಾಗಿತ್ತು. ಈಗ ಈ ಎಲ್ಲಾ ಬೆಳವಣಿಗೆಯಿಂದ ಮುಹೂರ್ತ ಮುಂದಕ್ಕೆ ಹೋಗಿದೆ.