ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ: ನಾಲ್ವರು ಕಾರ್ಮಿಕರ ಸಾವು, ಹಲವರಿಗೆ ಗಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಾಸೋರ್ ತ್ರಿವಳಿ ರೈಲು ದುರಂತ ಘಟನೆ ನಡೆದ 5 ದಿನದ ಅಂತರದಲ್ಲಿ ಇದೀಗ ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತಕ್ಕೀಡಾಗಿದೆ.

ರೈಲು ಹಳಿ ದುರಸ್ತಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ನಾಲ್ವರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಡಿಶಾದ ಜಾಜ್‌ಪುರ್ ಕಿಯೋಂಜರ್ ರೋಡ್ ರೈಲ್ವೇ ನಿಲ್ದಾಣದ ಬಳಿಕ ಕಾರ್ಮಿಕರು ರೈಲು ಹಳಿ ದುರಸ್ತಿ ಕಾರ್ಯ ಮಾಡಿದ್ದಾರೆ. ಈ ವೇಳೆ ಚಂಡಮಾರುತ ಕಾರಣ ದಿಡೀರ್ ಮಳೆ ಸುರಿದಿದೆ. ಗಾಳಿ ಸಹಿತ ಮಳೆಯಿಂದ ರಕ್ಷಣೆ ಪಡೆಯಲು ಕಾರ್ಮಿಕರು ನಿಂತಿದ್ದ ಗೂಡ್ಸ್ ರೈಲಿನ ಕಳೆಗಡೆ ಆಶ್ರಯ ಪಡೆದಿದ್ದಾರೆ. ಕೆಲ ಹೊತ್ತಲ್ಲೇ ಗೂಡ್ಸ್ ರೈಲು ಹಿಮ್ಮುಖವಾಗಿ ಚಲಿಸಿದೆ. ಇದರ ಪರಿಣಾಮ ಆಶ್ರಯ ಪಡೆದಿದ್ದ ಕಾರ್ಮಿಕರು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಸಂಧಿಯಲ್ಲಿ ಸಿಲುಕಿ ನಾಲ್ವರು ಪ್ರಾಣ ಕಳೆದುಕೊಂಡರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಲನ್ನು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲು ಎಂಜಿನ್ ಬೇರ್ಪಡಿಸಲಾಗಿತ್ತು. ಇದರಿಂದ ರೈಲು ಇದಕ್ಕಿದ್ದಂತೆ ಹಿಂದಕ್ಕೆ ಚಲಿಸಿದೆ. ರೈಲಿನ ಕೆಳಗೆ ಆಶ್ರಯ ಪಡೆದಿದ್ದ ಕಾರ್ಮಿಕರು ಓಡಿ ಜೀವ ಉಳಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದುರಂತ ನಡೆದಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೇ ಅಧಿಕಾರಿ ಬಿಸ್ವಜಿತ್ ಸಾಹು ಹೇಳಿದ್ದಾರೆ.

ಬಳಿಕ ಟ್ರಾಕ್ಟರ್‌ ಅನ್ನು ಸರಿ​ಸ​ಲಾ​ಗಿ​ದ್ದು, ರೈಲು 45 ನಿಮಿಷ ತಡವಾಗಿ ​ಸಂಚಾರ ಆರಂಭಿ​ಸಿ​ದೆ. ಒಂದು ವೇಳೆ ರೈಲು ವೇಗವಾಗಿ ಚಲಿಸುತ್ತಿದ್ದು, ಬ್ರೇಕ್‌ ಹಾಕದೆ ಹೋದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು. ಟ್ರ್ಯಾಕ್ಟರ್‌ ಅನ್ನು ವಶಕ್ಕೆ ಪಡೆಯಲಾಗಿದ್ದು ಎಫ್‌ಐಆರ್‌ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ನಿರ್ಲಕ್ಷ್ಯ ತೋರಿದ ರಸ್ತೆಯ ಗೇಟ್‌ಮ್ಯಾನ್‌ ಅನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!