‘ಆದಿಪುರುಷ್’ ಗೆ ಮತ್ತೊಂದು ಸಂಕಷ್ಟ: ಸಿನಿಮಾ ಬ್ಯಾನ್ ಮಾಡುವಂತೆ ಪ್ರಧಾನಿ ಮೋದಿಗೆ ಬಂತು ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶ ವಿದೇಶಗಳಲ್ಲಿ ತೆರೆಕಂಡ ಆದಿಪುರುಷ್ ಸಿನಿಮಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಂಡಿದ್ದು, ನೇಪಾಳದಲ್ಲಿ ಅನೇಕರು ಸಿನಿಮಾ ವನ್ನು ವಿರೋದಿಸಿದ್ದು, ಭಾರತದಲ್ಲೂ ಚಿತ್ರದಿಂದ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.

ಚಿತ್ರದ ಸಂಭಾಷಣೆ, ಪಾತ್ರ ಹಾಗೂ ಕಥೆಯ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿದ್ದು, ಸಿನಿಮಾ ಬ್ಯಾನ್ ನ ಕೂಗು ಕೇಳಿಬರುತ್ತಿದೆ.

ಇದೀಗ ಈ ಚಿತ್ರವನ್ನು ಥಿಯೇಟರ್ ಹಾಗೂ ಒಟಿಟಿಯಲ್ಲಿ ಬ್ಯಾನ್ ಮಾಡುವಂತೆ ‘ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್’ ​​​​ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದೆ.

‘ಆದಿಪುರುಷ್’ ಚಿತ್ರದಲ್ಲಿ ರಾವಣ ಪುಷ್ಪಕ ವಿಮಾನದ ಬದಲು ಬಾವಲಿ ಸಾಕುತ್ತಾನೆ ಮತ್ತು ಅದಕ್ಕೆ ಮಾಂಸ ಹಾಕುತ್ತಾನೆ. ಬ್ರಾಹ್ಮಣನಾಗಿ ರಾವಣನ ಕೈಯಲ್ಲಿ ಮಾಂಸ ಮುಟ್ಟಿಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಚಿತ್ರದಲ್ಲಿ ಗ್ಲಾಮರ್ ತೋರಿಸುವ ಪ್ರಯತ್ನ ಆಗಿದೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಹೀಗೆ ಹೇಳುತ್ತಾ ಹೋದರೆ ಟೀಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹಿಸಿದ್ದಾರೆ.

‘ಆದಿಪುರುಷ್ ಚಿತ್ರದ ಕಥೆ ಹಾಗೂ ಸಂಭಾಷಣೆ ರಾಮ ಹಾಗೂ ಹನುಮಂತನ ವರ್ಚಸ್ಸಿಗೆ ಧಕ್ಕೆ ತರುವಂತಿದೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಸಿನಿಮಾ ಇದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವುಂಟು ಮಾಡುವ ರೀತಿಯಲ್ಲಿದೆ’. ನಿರ್ದೇಶಕ ಓಂ ರಾವತ್, ಚಿತ್ರಕಥೆ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಶುಕ್ಲಾ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಎಫ್​ಐಆರ್ ದಾಖಲಾಗಬೇಕು. ಈ ರೀತಿಯ ಸಿನಿಮಾಗಳಲ್ಲಿ ಪ್ರಭಾಸ್, ಕೃತಿ ಸನೋನ್ ಹಾಗೂ ಸೈಫ್ ಅಲಿ ಖಾನ್ ನಟಿಸಬಾರದಿತ್ತು. ರಾಮಾಯಣ ಹಾಗೂ ಶ್ರೀರಾಮನ ಬಗ್ಗೆ ಇರುವ ನಂಬಿಕೆಯನ್ನು ನಾಶ ಮಾಡುವ ಸಿನಿಮಾ ಇದು’ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!